ಅಲಂಗಾರು ಹೋಲಿ ರೋಸರಿ ಚರ್ಚ್ ನ ಪಾಲನಾ ಪರಿಷತ್ ನ ಉಪಾಧ್ಯಕ್ಷರಾಗಿ ರಾಜೇಶ್ ಕಡಲಕೆರೆ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಲಾರೆನ್ಸ್ ಡಿಕುನ್ಹ,21 ಆಯೋಗಗಳ ಸಂಯೋಜಕರಾಗಿ ಸಂದೀಪ್ ರೋಡ್ರಿಗಸ್ ಅವರು ಆಯ್ಕೆಯಾಗಿದ್ದಾರೆ.
ಈ ಹಿಂದೆ ಇದೇ ಚರ್ಚ್ ನ 21 ಆಯೋಗಗಳ ಸಂಯೋಜಕರಾಗಿದ್ದ ರಾಜೇಶ್ ಕಡಲಕೆರೆ ಅವರು ವಿವಿಧ ಸಮಿತಿಗಳಲ್ಲಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.





