ಹೊಸಂಗಡಿ ಸಮೀಪದ ನೆತ್ತೋಡಿ ಎಂಬಲ್ಲಿ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹವು ಬುಧವಾರ ಸಂಜೆ ಪತ್ತೆಯಾಗಿದೆ.
ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ್ ಪೂಜಾರಿ ( 42) ಎಂಬಾತ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.
ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ವಿದೇಶದಲ್ಲಿದ್ದ ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದು,ಅಲ್ಲಿಂದ ಹೊಸಂಗಡಿಯಲ್ಲಿರುವ ಹೆಂಡತಿ ಮನೆಗೆ ಬಂದಿದ್ದನೆನ್ನಲಾಗಿದೆ.
ಭಾನುವಾರ ಅದ್ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್ ಗೆ ಮೆಸೇಜ್ ಮಾಡಿ ಈಬಗ್ಗೆ ಹೇಳಿಕೊಂಡಿದ್ದು,ಅವರು ‘ಸರಿಮಾಡುವ,ಆತುರದ ನಿರ್ಧಾರ ಬೇಡ’ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೆ ಆತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇರವಾಗಿ ನದಿ ಬಳಿ ಹೋಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಮೃತದೇಹದಲ್ಲಿ ಕೆಲವೊಂದು ಗಾಯದ ಗುರುತುಗಳಿದ್ದು ಈ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ಧಾರೆ.






