ಹೊಸಬೆಟ್ಟು ಸೊಸೈಟಿಯಲ್ಲಿ ಹಣ ದುರುಪಯೋಗ *ಬಡ್ಡಿ ಸಮೇತ ಪಾವತಿಸಲು ಮಾಜಿ ಸಿ.ಇ.ಒ.ಹಾಗೂ ಪ್ರೇರಕಿಗೆ ಆದೇಶಿಸಿದ ನ್ಯಾಯಾಲಯ

Picture of Namma Bedra

Namma Bedra

Bureau Report

ಹೊಸಬೆಟ್ಟು ಸೇವಾ ಸಹಕಾರ ಸಂಘದಲ್ಲಿ 2015- 16 ರಲ್ಲಿ ನಡೆದ ಹಣ ದುರುಪಯೋಗದ ಪ್ರಕರಣದಲ್ಲಿ ಮಾಜಿ ಸಿ.ಇ.ಒ.ಹರಿಯಪ್ಪ ಹಾಗೂ ಸ್ವಸಹಾಯ ಗುಂಪುಗಳ ಪ್ರೇರಕಿಯಾಗಿದ್ದ ಶಕೀಲಾ ಅಶೋಕ್ ಅವರಿಗೆ ದುರುಪಯೋಗದ ಹಣಕ್ಕೆ ಬಡ್ಡಿ ಸಮೇತ ಪಾವತಿಸಲು ಸಹಕಾರ ಸಂಘಗಳ ನ್ಯಾಯಾಲಯವು ಆದೇಶಿಸಿದೆ.
ಶಕೀಲಾ ಅಶೋಕ್ ಮತ್ತು ಹರಿಯಪ್ಪ ಅವರು ಸೇರಿಕೊಂಡು ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಸಾಲದ ರೀತಿಯಲ್ಲಿ ಹಣ ಪಡೆದು ಸಂಘದ ಹಣ ದುರುಪಯೋಗ ಪಡಿಸಿದ್ದರು. ಇದು 2015- 16 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದು ಅವರಿಬ್ಬರ ವಿರುದ್ಧ ಸಹಕಾರ ಸಂಘಗಳ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.
ಅಂದು ದುರುಪಯೋಗವಾಗಿದ್ದ ಒಟ್ಟು ಹಣ 11,75,339 ಆಗಿತ್ತು.
ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಹಣಕ್ಕೆ ಬಡ್ಡಿ ಸಮೇತ ಮರು ಪಾವತಿಸಲು ಇಬ್ಬರಿಗೂ ಆದೇಶಿಸಿದೆ.ಒಂದುವೇಳೆ ಈ ಮೊತ್ತವನ್ನು ಪಾವತಿಸಲು ವಿಫಲರಾದಲ್ಲಿ ಇವರಿಬ್ಬರ ಚರ ಯಾ ಸ್ಥಿರಾಸ್ತಿಯನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿ ವಸೂಲು ಮಾಡಲು ಹೊಸಬೆಟ್ಟು ಸಹಕಾರ ಸಂಘಕ್ಕೆ ನ್ಯಾಯಾಲಯವು ಆದೇಶಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top