ಮೂಡುಬಿದಿರೆಯ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಚೇರಿಯು ಪುರಸಭಾ ಕಚೇರಿ ಎದುರಿನ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಅವರು ತಿಳಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದು ಜೈನಮಠದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್,ಉದ್ಯಮಿ ಶಶಿಧರ ಶೆಟ್ಟಿ ಬರೋಡಾ,ಮಾಜಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್,ಕೆ.ಅಭಯಚಂದ್ರ,ಚೌಟರ ಅರಮನೆಯ ಕುಲದೀಪ್ ಎಂ, ಡಾ.ಅಮರಶ್ರೀ ಶೆಟ್ಟಿ,ಭಾಸ್ಕರ ಎಸ್.ಕೋಟ್ಯಾನ್, ಗುರುಪ್ರಸಾದ್ ಬಂಗೇರ,ಮೇಘನಾಥ ಶೆಟ್ಟಿ,ಅಬುಲ್ ಅಲಾ ಪುತ್ತಿಗೆ, ಅಶ್ವಿನ್ ಜೆ.ಪಿರೇರಾ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.





