ಬೈಕ್ ಕಳ್ಳತನದ ಆರೋಪದಲ್ಲಿ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ನಡೆದಿದೆ. ಈ ಹಲ್ಲೆಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮರೋಡಿ ಗ್ರಾಮದ ಪಲಾರಗೋಳಿ ಎಂಬಲ್ಲಿ ನೇಮೋತ್ಸವ ನಡೆಯುತ್ತಿತ್ತು.ದೇವಿ ಪ್ರಸಾದ್ ಎಂಬವರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗಿನ ಜಾವ ಎರಡೂವರೆ ಗಂಟೆ ವೇಳೆಗೆ ಅವರ ಮನೆಗೆ ಅಪರಿಚಿತರಿಬ್ಬರು ದೇವಿಪ್ರಸಾದ್ ಅವರ ಮನೆಯ ನಾಯಿಗಳಿಗೆ ಬಯ್ಯುತ್ತಿದ್ದ ಬಗ್ಗೆ ನೆರೆಮನೆಯವರು ಅವರಿಗೆ ಮಾಹಿತಿ ನೀಡುತ್ತಾರೆ.
ನೇಮೋತ್ಸವದಿಂದ ದೇವಿಪ್ರಸಾದ್ ಮತ್ತು ಇತರರು ಬಂದಾಗ ದೇವಿಪ್ರಸಾದ್ ಅವರ ಬೈಕ್ ಇದ್ದುಕೊಂಡು ಹೋಗುತ್ತಿದ್ದುದನ್ನು ತಡೆದಿದ್ದಾರೆ.ಆರೋಪಿಗಳು ಫಿರ್ಯಾದಿದಾರ ದೇವಿಪ್ರಸಾದ್ ಹಾಗೂ ಇತರರಿಗೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಏಳು ಮಂದಿ ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮೊಯ್ದಿನ್ ನಾಸಿರ್ ಹಾಗೂ ಅಬ್ದುಲ್ ಸಮದ್ ಈ ಪ್ರಕರಣದ ಆರೋಪಿಗಳಾಗಿದ್ದು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಆರೋಪಿಗಳ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ.
ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






