ವಿಲ್ಫ್ರೆಡ್ ಪಿಂಟೊ ಅವರಿಗಿಂದು ‘ಕರಾವಳಿ ಸಮಾಜ ಸೇವಾ ರತ್ನ’ ಪ್ರಶಸ್ತಿ

Picture of Namma Bedra

Namma Bedra

Bureau Report

ಕರಾವಳಿ ಫ್ರೆಂಡ್ಸ್ ಶಿರ್ತಾಡಿ ವತಿಯಿಂದ ಇಂದು ಶಿರ್ತಾಡಿಯಲ್ಲಿ ನಡೆಯಲಿರುವ ಹದಿಮೂರನೇ ವರ್ಷದ ಸಂಭ್ರಮದಲ್ಲಿ ಸಮಾಜ ಸೇವಕ ವಿಲ್ಫ್ರೆಡ್ ಪಿಂಟೊ ಅವರಿಗೆ ‘ ಕರಾವಳಿ ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಕರಾವಳಿ ಫ್ರೆಂಡ್ಸ್ ನ ಸಂಚಾಕಕರಾದ ಸಂದೀಪ್ ಸಾಲ್ಯಾನ್ ಅವರು ತಿಳಿಸಿದ್ದಾರೆ.
ಶಿರ್ತಾಡಿ, ವಾಲ್ಪಾಡಿ ಪರಿಸರದಲ್ಲಿ ಜನಪ್ರಿಯ ಸಮಾಜಸೇವಕರಾಗಿರುವ ವಿಲ್ಫ್ರೆಡ್ ಅವರು ಈ ಪರಿಸರದಲ್ಲಿ ‘ವಿಲ್ಫಿ’ ಎಂದೇ ಖ್ಯಾತರಾಗಿದ್ದಾರೆ.
ಊರಲ್ಲಿ,ಪಕ್ಕದ ಊರಲ್ಲಿ ಏನಾದರೂ ಸಂಭವಿಸಿದ್ದಲ್ಲಿ ಮೊದಲು ಆ ಜಾಗಕ್ಕೆ ಧಾವಿಸಿ ಅಶಕ್ತರನ್ನು ಆಸ್ಪತ್ರೆಗೆ ದಾಖಲಿಸಲು, ತುರ್ತು ರಕ್ತದ ಅವಶ್ಯಕತೆ ಇದ್ದಲ್ಲಿ ಆ ವ್ಯವಸ್ಥೆಯನ್ನು ಮಾಡಿ ಮಾನವೀಯ ಸೇವೆ ಮಾಡುತ್ತಾ ಶಿರ್ತಾಡಿ ಪರಿಸರದಲ್ಲಿ ಸಾಮಾಜಿಕ ಮುಂದಾಳಾಗಿ ಗಮನಸೆಳೆಯುತ್ತಿದ್ದಾರೆ.
ಶಿರ್ತಾಡಿಯಲ್ಲಿ ಸೌಹಾರ್ದ ಫ್ರೆಂಡ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಆ ಮೂಲಕ ತನ್ನದೇ ಆದ ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ವಿಲ್ಫ್ರೆಡ್ ಅವರು ಅಗತ್ಯ ಸಂದರ್ಭದಲ್ಲಿ ಅಂಬುಲೆನ್ಸ್ ಗೆ ಕಾಯದೆ ತನ್ನ ಸ್ಕಾರ್ಪಿಯೋ ಮೂಲಕವೇ ಅನೇಕ ಜನರನ್ನು ಆಸ್ಪತ್ರೆಗೆ ದಾಖಲಿಸಿದ ಉದಾಹರಣೆಗಳು ಸಾಕಷ್ಟಿದೆ.
ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ತನ್ನದೇ ಆದ ಸೇವೆ ನೀಡುತ್ತಿರುವ ವಿಲ್ಫಿ ಅವರ ಸೇವೆಗಳನ್ನು ಗುರುತಿಸಿ ಕರಾವಳಿ ಫ್ರೆಂಡ್ಸ್ ಇಂದು ಅವರನ್ನು ಸನ್ಮಾನಿಸುತ್ತಿದೆ.
ವಿಲ್ಫಿ ಅವರ ಸಾಮಾಜಿಕ ಸೇವೆಗಳು ಇನ್ನಷ್ಟು ಕಾಲ ಮುಂದುವರಿಯಲಿ ಎಂಬ ಹಾರೈಕೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top