ನಾಳೆ ‘ಬೆದ್ರ ಕಂಬುಲ’ ಶಿಸ್ತುಬದ್ಧವಾದ ಕಂಬಳಕ್ಕೆ ರೆಡಿಯಾಗಿದೆ ಒಂಟಿಕಟ್ಟೆ

Picture of Namma Bedra

Namma Bedra

Bureau Report

ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ,ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಪ್ಪತ್ತಮೂರನೇ ವರ್ಷದ ಕಂಬಳೋತ್ಸವಕ್ಕೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ ಚೆನ್ನಯ ಜೋಡುಕರೆಯು ಸಕಲ ರೀತಿಯಲ್ಲಿ ಸಜ್ಜಾಗಿದೆ.


ಈಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ ಅವರು ‘ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದುಕೊಂಡು ಬಂದಿರುವ ಈ ಕಂಬಳವು ಈಬಾರಿಯೂ ಶಿಸ್ತುಬದ್ಧವಾಗಿ ನಡೆಯಲಿದೆ, ಸಮಿತಿಯ ಪದಾಧಿಕಾರಿಗಳು ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಕೋಣಗಳಿಗೆ ಹೊಡೆಯದೆ ಕಂಬಳ ಆಗಬೇಕೆಂಬ ಕನಸು ನಮ್ಮದು, ಆ ನಿಟ್ಟಿನಲ್ಲಿ ಹಿಂಸಾರಹಿತ ಕಂಬಳವಾಗಲು ಕಂಬಳ ಕೋಣಗಳ ಯಜಮಾನರು, ಓಟಗಾರರು ನಮ್ಮ ಜೊತೆ ಕೈಜೋಡಿಸಲಿದ್ದಾರೆ ಎನ್ನುವ ವಿಶ್ವಾಸವಿದೆ, ಕಂಬಳ ನಡೆಯುವ ಪ್ರದೇಶದಲ್ಲಿ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆಗೆ ಸಮಿತಿಯ ಸದಸ್ಯರು , ಯುವಕರು ತಯಾರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಕಂಬಳ ಕರೆಯ ಕುರಿತಾಗಿ ಕಾರ್ಯದರ್ಶಿ ರಂಜಿತ್ ಪೂಜಾರಿ ಮಾಹಿತಿ ನೀಡಿದರು.
ಕೋಶಾಧಿಕಾರಿ ಭಾಸ್ಕರ ಎಸ್.ಕೋಟ್ಯಾನ್ ಅವರು ಮೂಡುಬಿದಿರೆ ಕಂಬಳಕ್ಕೆ ತನ್ನದೇ ಆದ ಒಳ್ಳೆಯ ಹೆಸರಿದೆ, ಅದಕ್ಕೆ ಸರ್ವರ ಸಹಕಾರ ಕಾರಣ,ಈಬಾರಿಯೂ ಕಂಬಳ ಯಶಸ್ವಿಯಾಗಿ ನಡೆಯಲಿದೆ ಎಂದರು.
ನಾಳೆ ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ.ಅವರು ಸಭಾ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಅಂತರಾಷ್ಟ್ರೀಯ ವಾಸ್ತು ತಜ್ಞರಾಗಿರುವ ಚಂದ್ರಶೇಖರ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಲಿದ್ದು ಜವನೆರ್ ಬೆದ್ರದ ಸ್ಥಾಪಕರಾದ ಅಮರ್ ಕೋಟೆ ಅವರಿಗೆ ಗೌರವ ಸನ್ಮಾನವಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವೀರರಾಣಿ ಅಬ್ಬಕ್ಕ 500 ರ ಸಂಭ್ರಮದ ಪ್ರಶಸ್ತಿ ಪುರಸ್ಜೃತರಾದ ಎಂ.ಆರ್.ಜಿ.ಗ್ರೂಪ್ ನ ಅಧ್ಯಕ್ಷರಾದ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಸನ್ಮಾನ ಹಾಗೂ ಅಸ್ತ್ರ ಗ್ರೂಪ್ ನ ಮುಖ್ಯಸ್ಥರಾದ ಲಾಂಚುಲಾಲ್ ಅವರಿಗೆ ಕೋಟಿ ಚೆನ್ನಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಆಂದ್ರಪ್ರದೇಶದ ರಾಜ್ಯಪಾಲರಾಗಿರುವ ಜಸ್ಟೀಸ್ ಎಸ್.ಅಬ್ದುಲ್ ನಝೀರ್ ಅವರು ಉದ್ಘಾಟಿಸಲಿದ್ದಾರೆ.
ಸಚಿವರಾದ ವಿ‌.ಸೋಮಣ್ಣ,ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್,ಸಚಿವರಾದ ದಿನೇಶ್ ಗುಂಡೂರಾವ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸುಧೀರ್ ಪುತ್ರನ್, ಸುರೇಶ್ ಪೂಜಾರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top