ಬೆದ್ರ: ಅಡ್ಡಾದಿಡ್ಡಿ ಬಸ್ ನಿಲುಗಡೆಗೆ ಬ್ರೇಕ್! *ಟೈಮಿಂಗ್ಸ್, ಪಾರ್ಕಿಂಗ್ ಪಾಲನೆಯಲ್ಲಿ ಗಮನಸೆಳೆದ ಬಸ್ ಮಾಲಕರು, ಏಜೆಂಟರು!

Picture of Namma Bedra

Namma Bedra

Bureau Report

ಪಜೆ ಹಾಕಿಕೊಂಡು ಬಸ್ಸು ನಿಲ್ದಾಣಕ್ಕೆ ಬರುವಾಗ ಬಹಳಷ್ಟು ಅಮಸರದಿಂದ ಬಂದು ಪ್ರಯಾಣಿಕರನ್ನು ಇಳಿಸಲು, ಹತ್ತಲು ಬೊಬ್ಬೆ ಹಾಕುತ್ತಿದ್ದ ದೃಶ್ಯ, ಟೈಮಿಂಗ್ಸ್ ವಿಚಾರದಲ್ಲಿ ಏಜೆಂಟರ ನಡುವೆ , ಚಾಲಕರ ನಡುವೆ, ಕಂಡೆಲ್ಟರ್ ಗಳ ನಡುವೆ ನಾನ್ ವೆಜ್ ಮಾತುಗಳು, ಕೆಲವೊಮ್ಮೆ ಕಾಲರ್ ಹಿಡಿಯುವಷ್ಟರ ಮಟ್ಟಿಗೆ ತಲುಪುತ್ತಿದ್ದ ದೃಶ್ಯಗಳು, ಬಸ್ ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಯಾವ ಊರಿಗೆ ಯಾವ ಬಸ್ಸೆಂದು ಪ್ರಯಾಣಿಕರಿಗೆ ಗೊಂದಲವಾಗುತ್ತಿದ್ದ ದೃಶ್ಯಗಳು ಬೆದ್ರ ಬಸ್ ಸ್ಟಾಂಡಲ್ಲಿ ಮಾಮೂಲಾಗಿತ್ತು. ಇದೀಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ.


ಬೆದ್ರದ ಬಸ್ ಏಜೆಂಟರು ಈ ಹೊಸ ಪ್ರಯತ್ನದಲ್ಲಿ ಸೈ ಎನಿಸಿದ್ದಾರೆ‌.ಇದಕ್ಕೆ ಬಸ್ ಮಾಲಕರ ಬೆಂಬಲವೂ ಇದ್ದು ಇಬ್ಬರೂ ಜಂಟಿಯಾಗಿ ತೆಗೆದುಕೊಂಡ ನಿರ್ಧಾರದಿಂದ ಬೆದ್ರ ಬಸ್ ಸ್ಟಾಂಡ್ ಇದೀಗ ಮಾದರಿಯಾಗುತ್ತಿದೆ.
ಹಿಂದಿನಂತೆ ಜಗಳವಿಲ್ಲ, ಪಜೆ ಇಲ್ಲ, ಒಟ್ರಾಸಿ ಪಾರ್ಕಿಂಗ್ ಇಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ನಿಗದಿಪಡಿಸಿದ ಟೈಮಿಂಗ್ಸ್ ನಂತೆಯೇ ಬಸ್ಸುಗಳು ಆಯಾಯ ಊರು ತಲುಪುತ್ತಿದೆ. ಆ ನಿಟ್ಟಿನಲ್ಲಿ ಬಸ್ ಚಾಲಕರು ಸಮಯ ಪರಿಪಾಲನೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುತ್ತಾರೆ.
ಈ ಹಿಂದೆ ಲೋಕಲ್ ಬಸ್ಸುಗಳಂತೆಯೇ ಕೆಲವು ಎಕ್ಸ್‌ಪ್ರೆಸ್‌ ಬಸ್ಸುಗಳೂ ಅಲ್ಲಲ್ಲಿ ಸ್ಟಾಪ್ ನೀಡಿ ಬಸ್ ನಿಲ್ದಾಣಕ್ಕೆ ಬರುವಾಗ ಯಮಧೂತನಂತೆ ಬಂದು ಜಪ್ಪಿ ಜಪ್ಪಿ….ಪೋಲೆ ಪೋಲೆ ಅಂತ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುವಂತೆ ಮಾಡುತ್ತಿದ್ದ ದೃಶ್ಯಗಳು ಮಾಮೂಲಾಗಿತ್ತು.ಇದರಿಂದ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಮಸ್ಯೆಯಾಗುತ್ತಿತ್ತು.
ಕೆಲವೊಮ್ಮೆ ತಡವಾಗಿ ಬಂದ ಬಸ್ಸುಗಳು ನಿಲ್ದಾಣದ ಹೊರಗೆ ಹೋಗಿ ನಿಂತು ಮತ್ತಷ್ಟು ಉಪದ್ರ ಮಾಡುತ್ತಿತ್ತು.
ಇದೀಗ ಅದ್ಯಾವ ಕಿರಿಕಿರಿಯೂ ಬೆದ್ರ ಬಸ್ ಸ್ಟಾಂಡಲ್ಲಿಲ್ಲ. ಆ ನಿಟ್ಟಿನಲ್ಲಿ ಬೆದ್ರ ಬಸ್ ಏಜೆಂಟರು ಅಭಿನಂದನಾರ್ಹರು..ಬಸ್ಸುಗಳು ಸಾಲಾಗಿ ನಿಂತು ಬೆದ್ರ ಸ್ಟಾಂಡಿನ ಚಂದವನ್ನು ಹೆಚ್ಚಿಸಿದೆ.
“ಹಿಂದೆ ಮಂಗಳೂರಿನಿಂದ ಬೆಳುವಾಯಿ ತಲುಪಲು ಒಂದೂವರೆ ಗಂಟೆ ಬೇಕಿತ್ತು, ಈಗ ಆರ್‌ಟಿಒ ನಿಗದಿಪಡಿಸಿದ ಒಂದುಕಾಲು ಗಂಟೆಗೆ ಬಸ್ ಗಳು ತಲುಪುವುದರಿಂದ ನನ್ನಂತಹ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ” ಎಂದು ನಿತ್ಯ ಪ್ರಯಾಣಿಕರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದೆದುರಿನ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕಿರಿಕಿರಿಯನ್ನು ಪುರಸಭೆಯವರು ಸರಿಪಡಿಸಿದ್ದಲ್ಲಿ ಇಲ್ಲಿನ ಓಲ್ಡ್ ಪ್ರಾಬ್ಲೆಮ್ ಗೆ ಫುಲ್ ಸ್ಟಾಪ್ ಬೀಳಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top