ಮೂಡುಬಿದಿರೆಯಲ್ಲಿ ‘ಯಾನೊರಿ ಬರೊಲಿಯಾ’ ನಾಟಕದ ಮೊದಲ ಪ್ರಯೋಗ *ಕಲಾವಿದರಿಗೆ ಸನ್ಮಾನ

Picture of Namma Bedra

Namma Bedra

Bureau Report

ಚಾ ಪರ್ಕ ತಂಡದ ಸೂಪರ್ ಹಿಟ್ ನಾಟಕ ‘ಯಾನೊರಿ ಬರೊಲಿಯಾ’ ಹಲವು ವರ್ಷಗಳ ಬಳಿಕ ಮತ್ತೊಮ್ಮೆ ಪ್ರದರ್ಶನಗೊಳ್ಳುತ್ತಿದ್ದು ಪ್ರಥಮ ಪ್ರಯೋಗವು ಮೂಡುಬಿದಿರೆ ಕನ್ನಡ ಭವನದಲ್ಲಿ ಜರುಗಿತು.
ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸಂಪಿಗೆ ಚರ್ಚ್ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಅವರು ನಾಟಕದ ಮೊದಲ ಪ್ರಯೋಗವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಮಾಜಿ ಸಚಿವ ಕೆ.ಅಭಯಚಂದ್ರ, ಬಿಜೆಪಿ ಮುಖಂಡರಾದ ಸುದರ್ಶನ ಎಂ, ರಂಜಿತ್ ಪೂಜಾರಿ, ತಂಡದ ಸಂಚಾಲಕಿ ಶರ್ಮಿಳಾ ಡಿ.ಕಾಪಿಕಾಡ್, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಮೇಘನಾಥ ಶೆಟ್ಟಿ, ದಿವಾಕರ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್, ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚಾ ಪರ್ಕ ತಂಡದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಸದಾಶಿವ ಅಮೀನ್ ಹಾಗೂ ತಿಮ್ಮಪ್ಪ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಸಂಘಟಕ ಅಶ್ರಫ್ ವಾಲ್ಪಾಡಿ, ಹಫೀಝ್ ತೋಡಾರ್,ಸುರೇಶ್ ಅಂಚನ್ ಜಯಶ್ರೀ, ಬಾಲರಾಜ್ ನೆಲಗುಡ್ಡೆ, ಸಂತೋಷ್ ಶೆಟ್ಟಿ ಮಿಜಾರ್, ದೀಪ್ತಿ,ನಿಶಾ, ಯಶೋಧರ ಬಂಗೇರ, ಪ್ರೇಮಶ್ರೀ, ಶರತ್ ದೇವಾಡಿಗ, ಸಿದ್ದೀಕ್ ಗಂಟಾಲ್ಕಟ್ಟೆ,ರಶೀದ್ ವಾಲ್ಪಾಡಿ, ಗೋಪಾಲ ವಾಲ್ಪಾಡಿ, ಸ್ವಾತಿಕ್ ಮಕ್ಕಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top