ಗುರುವಾರ ರಾತ್ರಿ ಬನ್ನಡ್ಕ ಬಳಿ ಸಂಭಬವಿಸಿದ ಕಾರು- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ,ರೋಟರಿ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಸುವರ್ಣ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಶ್ರವಣ್ ಮತ್ತು ಆತನ ಸ್ನೇಹಿತ ಸೂರಜ್ ಅವರೊಂದಿಗೆ ಕಾರ್ಕಳ ಕಡೆ ಬೈಕಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್ಕಳ ಕಡೆಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆ.ಬನ್ನಡ್ಕ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶ್ರವಣ್ ಸುವರ್ಣ ಮೃತಪಟ್ಟಿದ್ದಾರೆ.
ಶ್ರವಣ್ ಕೋಟೆಬಾಗಿಲಿನ ಸದಾನಂದ ಸುವರ್ಣ- ಜಯಶ್ರೀ ದಂಪತಿ ಪುತ್ರ. ಸದಾನಂದ ಅವರಿಗೂ ಕೆಲ ವರ್ಷದ ಹಿಂದೆ ಅಪಘಾತವಾಗಿ ಮನೆಯಲ್ಲಿದ್ದಾರೆಂದು ತಿಳಿದುಬಂದಿದೆ.
ಬನ್ನಡ್ಕದಲ್ಲಿ ರಾ.ಹೆದ್ದಾರಿ ಕೆಲಸ ಪ್ರಾರಂಭವಾದ ಬಳಿಕ ಹಲವು ಅಪಘಾತಗಳು ಸಂಭವಿಸಿ ಹಲವು ಜೀವಗಳು ಬಲಿಯಾಗಿದೆ.










