ಮೂಡುಬಿದಿರೆ , ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ವಿವಿಧೆಡಗಳಲ್ಲಿ ಇಂದು ( ಶನಿವಾರ) ಪನಿ ಪನಿ ಬರ್ಸ ಬಿದ್ದಿದೆ.



ಕಳೆದ ಮೂರ್ನಾಲ್ಕು ದಿವಸಗಳಿಂದ ಬಿಸಿಲಭೇಗೆಗೆ ಮೈಯೆಲ್ಲಾ ಬೆವರಿಳಿಸಿಕೊಂಡು ‘ ಎಂಚಿ ಸೆಕೆ ಮಾರ್ರೆ’ ಎಂದು ಕೇಳುವಂತಾದವರಿಗಿಂದು ತಂಪು ತಂಪಾದ ವಾತಾವರಣ.
ಶಿರ್ತಾಡಿ, ವಾಲ್ಪಾಡಿ, ಬಜಗೋಳಿ ಮುಂತಾದ ಕಡೆಗಳಲ್ಲಿ ಸಾಧಾರಣ ಮಳೆ ಬಂದಿದ್ದು ಹೆಚ್ಚಿನ ಕಡೆಗಳಲ್ಲಿ ಹನಿಹನಿಮಳೆಯು ‘ ಸುರೂತ ಬರ್ಸೊಗು ಭೂಮಿದ ಪರಿಮಳ’ ಎನ್ನುವ ತುಳುವರ ಮಾತಿನ ಅನುಭವವನ್ನು ನೀಡಿದೆ.
ಇನ್ನು ‘ ಪನಿಪನಿ ಬರ್ಸೊಗು ಕೊಡೆ ದಾಯೆ’ ಎಂದು ಸಣ್ಣ ಮಕ್ಕಳು ಕುಷಿಯಿಂದ ಮನೆಯಂಗಳದಲ್ಲಿ ಕುಣಿದು ಮೊದಲ ಮಳೆಯನ್ನು ಸ್ವಾಗತಿಸಿದ್ದಾರೆ.










