ಪಾಲಡ್ಕದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಪ್ರಸನ್ನ ಹೆಗ್ಡೆ, ಹಿರಿಯ ಕಲಾವಿದ ವೆಂಕಟೇಶ ಬಂಗೇರ ಸಹಿತ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು .
ಕನ್ನಡ ಸೇವೆಗಾಗಿ ಸುದರ್ಶನ ಶೆಟ್ಟಿ ಕಡಂದಲೆ, ಯಕ್ಷಗಾನ ಕ್ಷೇತ್ರದ ಸಾಧಕ ದಾಮೋದರ ಸಫಲಿಗ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಕಿರಣ್ ಭಟ್ ಕಡಂದಲೆ ಹಾಗೂ ಕೃಷಿ ಸಾಧಕ ಎಡ್ವರ್ಡ್ ರೆಬೆಲ್ಲೊ ತಾಕೊಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ, ಕೆ.ಶ್ರೀಪತಿ ಭಟ್, ಸುಚರಿತ ಶೆಟ್ಟಿ, ಡಾ.ಅಮರಶ್ರೀ, ಪ್ರದೀಪ್ ಕುಮಾರ್ ಕಲ್ಕೂರ, ರಾಮಕೃಷ್ಣ ಶಿರೂರು,ವೇಣುಗೋಪಾಲ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.











