ಮೂಡುಬಿದಿರೆ ಮಾರ್ಪಾಡಿಯ ಅನೀಶ್ ಅವರ ಸಾರಥ್ಯದ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ನ ಏಳನೇ ಶಾಖೆಯು ರಾಯಿ-ಕೊಯಿಲಾ-ಅರಳದ ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರದಲ್ಲಿ ಭಾನುವಾರ ಶುಭಾರಂಭಗೊಂಡಿತು.
ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ನ ಮಾಜಿ ಅಧ್ಯಕ್ಷರಾಗಿರುವ ಲಕ್ಷ್ಮೀಶ್ ಶೆಟ್ಟಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಅಧ್ಯಕ್ಷರಾದ ಶೇಖರ್ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ ನ ಸಂತೋಷ್ ಕುಮಾರ್,ಲೋಕೇಶ್ ಕೈತ್ರೋಡಿ,ಸುಶಾಂತ್ ಕರ್ಕೇರಾ ಮೂಡುಬಿದಿರೆ,ಸಂತೋಷ್ ಶಿವನಗರ,ಯೋಗೀಶ್ ಕುಲಾಲ್ ಕಯರ್ದಡಿ,ಶ್ರೀಮತಿ ಶೋಭಾ,ಕೀರ್ತನ್ ಕೊಯ್ಲ,ಶ್ರೀಮತಿ ಸುಚಿತ್ರಾ ರಮೇಶ್,ಸಂತೋಷ್ ರಾಯಿಬೆಟ್ಟು,ರವೀಂದ್ರ ಪೂಜಾರಿ ಬದನಾಡಿ ಹಾಗೂ ಪತ್ರಕರ್ತ ಅಶ್ರಫ್ ವಾಲ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಸಂಸ್ಥೆಯ ಮುಖ್ಯಸ್ಥರಾದ ಅನೀಶ್ ಅವರ ತಂದೆ ಸುರೇಂದ್ರನ್, ತಾಯಿ ರಮಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅನೀಶ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿ, ಸಹಕರಿಸಿದವರ ಸಹಕಾರ,ವಿದ್ಯಾರ್ಥಿಗಳು, ಪೋಷಕರ ಪ್ರೋತ್ಸಾಹ ದ ಬಗ್ಗೆ ವಿವರಿಸಿದರು. ಶೀಘ್ರದಲ್ಲೇ ಎಂಟನೇ ಶಾಖೆ ವಾಮಂಜೂರಿನಲ್ಲಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.










