ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಅರಿವು ಮೂಡಿಸುವ ಉದ್ದೇಶದಿಂದ ಅಳಿಯೂರು ಸರಕಾರಿ ಪ್ರೌಢಶಾಲೆಯ ಗ್ರಾಹಕ ಸಂಘವು ‘ ಗ್ರಾಹಕರ ಹಕ್ಕುಗಳು ಹಾಗೂ ಜವಾಬ್ದಾರಿಗಳು’ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ಹಮ್ಮಿಕೊಂಡಿತ್ತು.

ಶಿರ್ತಾಡಿ ಭುವನಜ್ಯೋತಿ ಕಾನೂನು ಮಹಾವಿದ್ಯಾಲಯದ ಸಂಚಾಲಕರು ಹಾಗೂ ಪ್ರಾಧ್ಯಾಪಕರಾಗಿರುವ ಪ್ರಶಾಂತ್ ಎನ್.ಅವರು ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿ ‘ವಿದ್ಯಾರ್ಥಿಗಳು ಗ್ರಾಹಕರಾಗಿ ನೆನಪಿನಲ್ಲಿಡಬೇಕಾದ ಅಂಶಗಳು,ಗ್ರಾಹಕರು ಯಾವರೀತಿ ಮೋಸ ಹೋಗಬಹುದು, ಗ್ರಾಹಕ ವೇದಿಕೆಯಿಂದ ಹೇಗೆ ಸಹಾಯವನ್ನು ಪಡೆಯಬಹುದು’ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವೀಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಿನಿ ಅವರು ಸ್ವಾಗತಿಸಿದರು. ಗ್ರಾಹಕ ಸಂಘದ ಸಂಚಾಲಕರಾದ ಡಾ.ಆನಿ ಡಿಂಪಲ್ ಕ್ಯಾಸ್ತಲಿನೊ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











