ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ನಲ್ಲಿ ಸಂತ ತೆರೇಝಾರವರ ವಾರ್ಷಿಕ ಹಬ್ಬದ ಬಲಿಪೂಜೆ ಮತ್ತು ಚರ್ಚ್ ನ ನೂತನ ವೆಬ್ ಸೈಟ್ www.shirthadychurch.in ಇದರ ಲೋಕಾರ್ಪಣೆ ನಡೆಯಿತು.
ಧರ್ಮಗುರುಗಳು, ‘ಉಜ್ವಾಡ್’ ಇದರ ಸಂಪಾದಕರಾದ (ಉಡುಪಿ ಧರ್ಮಪ್ರಾಂತ್ಯ) ವಂದನೀಯ ಆಲ್ವಿನ್ ಸಿಕ್ವೇರ ಅವರು ಬಲಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನೂತನ ವೆಬ್ ಸೈಟನ್ನು ಅವರು ಲೋಕಾರ್ಪಣೆಗೊಳಿಸಿದರು.
ಧರ್ಮಗುರುಗಳಾದ ವಂ.ಹೆರಾಲ್ಡ್ ಮಸ್ಕರೇನಸ್, ವಂ.ಮೆಲ್ವಿನ್ ಡಿಸೋಜ, ವಂ. ದೀಪಕ್ ನೊರೊನ್ಹ, ವಂ.ರೊಕ್ವಿನ್ ಪಿಂಟೊ, ವೆಬ್ ಸೈಟ್ ವಿನ್ಯಾಸಗಾರ ಜೈಸನ್ ಪಿರೇರ, ಉಷಾ ಗ್ರೆಟ್ಟಾ ಡಾಯಸ್, ಲಾರೆನ್ಸ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.
