ಫೆ.10 ರಂದು ಕಾಶಿಪಟ್ಣ ಗ್ರಾಮದಲ್ಲೊಂದು ಘಟನೆ ನಡೆಯುತ್ತದೆ. ಸೇಲ್ಸ್ ಮ್ಯಾನ್ ನಂತೆ ಟಿಪಗ ಟಾಪ್ ಆಗಿ ಬಂದಿದ್ದ ಯುವಕನೊಬ್ಬ ಮಹಿಳೆಯೊಬ್ಬರ ಮನೆ ಮುಂದೆ ಬಂದು ‘ ಬಂಗಾರ್ ಪಾಲಿಶ್’ ಮಾಡಿಕೊಡುತ್ತೇನೆಂದು ಬಂಗಾರದಂತಹ ಮಾತುಗಳೊಂದಿಗೆ ನಂಬಿಸಿದ್ದ.
ಪಾಪ, ಆ ಮಹಿಳೆ ಆತನ ಮಾತುಗಳನ್ನು ಅಸಲಿಯಾಗಿರಬಹುದೆಂದೇ ನಂಬಿ ಅಸಲಿ ಚಿನ್ನವನ್ನು ಕೊಟ್ಟುಬಿಟ್ಟರು. ಆತನ ಅಸಲಿತನ ಗೊತ್ತಾದದ್ದು ಆತ ಅಸಲಿ ಚಿನ್ನವನ್ನು ಹಿಡ್ಕೊಂಡು ಪರಾರಿಯಾದ ನಂತರವೇ..
ಅದೇನೋ ಮಂಕ್ ಮರ್ಲ್ ಮಾಡಿ ,ಏನೇನೋ ಹೇಳಿ ಬಂಗಾರವನ್ನು ಕೊಂಡುಹೋಗುವಲ್ಲಿ ಆತ ಅಂದು ಸಕ್ಸಸ್ ಆಗಿದ್ದ.ಆದರೆ ಆತನನ್ನು ಸಿಸಿ ಕೆಮರಾ ಸೆರೆ ಹಿಡಿದಿರುವುದು ಆತನಿಗೆ ಗೊತ್ತಿಲ್ಲ. ಅದೇ ದಿನ ಸಿಸಿ ಕೆಮರಾದಲ್ಲಿ ಆತನ ‘ಚಂದ’ ದ ಮೋನೆ ಯ ಗುರ್ತ ಪೊಲೀಸರಿಗೆ ಗೊತ್ತಾಗಿತ್ತು.ಅವನ ಹೆಸರು ಚಂದನ ಕುಮಾರ್. ಬಿಹಾರ ಮೂಲದವನು.
ಪಾಲಿಶ್ ಮಾಡುತ್ತೇನೆಂದು ಪಾಲೀಶಿನ ಮಾತುಗಳೊಂದಿಗೆ ನಂಬಿಸಿ ಚಿನ್ನದ ಸರವನ್ನು ಕಪ್ಪು ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದ ಈ ಚಂದನವು ಹೆಚ್ವು ದೂರ ಏನೂ ಹೋಗಿಲ್ಲ.
ತಾನು ಸೇಫ್ ಆಗಿದ್ದೇನೆಂದು ನಂಬಿದ್ದ.ಆದರೆ ವೇಣೂರು ಪೊಲೀಸರು ಆತನ ಬೆರಿ ಬಿಡಲಿಲ್ಲ ಎನ್ನುವುದು ಕಪ್ಪು ಚಂದನನಿಗೆ ಗೊತ್ತೇ ಇರಲಿಲ್ಲ.
ಮೊನ್ನೆಯದಿನ ಅತ ಬೆದ್ರ ಸಮೀಪದ ಗಂಟಾಲ್ಕಟ್ಟೆ ಬಳಿ ಇದ್ದಾನೆಂಬ ಸುಳಿವು ಸಿಗುತ್ತದೆ.ವೇಣೂರು ಎಸ್.ಐ.ಗಳಾದ ಅಕ್ಷಯ್ ಹಾಗೂ ವಾಮನ ಅವರ ಟೀಮು ಗಂಟಾಲ್ಕಟ್ಟೆಯಲ್ಲಿದ್ದ ಚಂದನದ ಬೆರಿಗೆ ಕೈ ಹಾಕಿ ‘ಬಾ..ಚಿನ್ನಾ’ ಅಂತ ವೇಣೂರಿಗೆ ಎಳೆದು ತಂದಿದೆ.
ಠಾಣೆಯಲ್ಲಿ ಆತನಿಗೊಂದು ರೌಂಡ್ ‘ಪಾಲಿಶ್’ ಮಾಡಿ ಅವನ ಸಾಹಸಗಾಥೆಯ ವಿವರ ಪಡೆದುಕೊಂಡಿದ್ದಾರೆ.





