ಅಳಿಯೂರು ಹೈಸ್ಕೂಲಿನಲ್ಲಿ ಗಮನಸೆಳೆದ ಮೆಟ್ರಿಕ್ ಮೇಳ*ಸಂತೆಯಲ್ಲೊಂದು ಸಂಭ್ರಮೋತ್ಸವ

Picture of Namma Bedra

Namma Bedra

Bureau Report

ಅಳಿಯೂರು ಸರಕಾರಿ ಪ್ರೌಢಶಾಲೆಯ ಗ್ರಾಹಕ ಸಂಘವು ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹಣದ ವ್ಯವಹಾರ ನಡೆಸುವ ಮತ್ತು ಗಣಿತೀಯ ಹಾಗೂ ವೃತ್ತಿಪರ ಚಿಂತನೆಗಳನ್ನು ಬೆಳೆಸುವ ಉದ್ದೇಶದೊಂದಿಗೆ ಮೆಟ್ರಿಕ್ ಮೇಳವನ್ನು ಹಮ್ಮಿಕೊಂಡಿತ್ತು.
ಈ ಮೇಳದಲ್ಲಿ‌ 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ 32 ತಂಡಗಳು ಭಾಗವಹಿಸಿತ್ತು .


ವಿದ್ಯಾರ್ಥಿಗಳೇ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲು,ಗೃಹೋಪಯೋಗಿ ವಸ್ತುಗಳು, ಫ್ಯಾನ್ಸಿ ಹಾಗೂ ಅಲಂಕಾರಿಕ ವಸ್ತುಗಳು,ಸೀರೆ,ಚೂಡಿದಾರದಂತಹ ಉಡುಪುಗಳು,ಲೇಖನಾ ಸಾಮಾಗ್ರಿ,ಅಕ್ವೇರಿಯಂ ಮೀನುಗಳು ಹೀಗೆ ವೈವಿಧ್ಯಮಯ ಮತ್ತು ವಿಶೇಷವಾದ ದಿನನಿತ್ಯ ಬಳಕೆಯ ವಸ್ತುಗಳನ್ನು ವಿದ್ಯಾರ್ಥಿಗಳು ತಮ್ಮ ಮಳಿಗೆಗಳಲ್ಲಿ ಮಾರಾಟ ಮಾಡಿದರು.
ವಿದ್ಯಾರ್ಥಿಗಳು ನಿರ್ವಹಿಸಿದ ಹಲವಾರು ಆಹಾರ ಹಾಗೂ ಆಟದ ಮಳಿಗೆಗಳು ಸಂತೆಯಲ್ಲಿ ಸಂಭ್ರಮೋತ್ಸವ ಮೂಡಿಸಿತ್ತು.


ವಿದ್ಯಾರ್ಥಿಗಳೇ ತಮ್ಮ ಸ್ವಂತ ಬ್ರಾಂಡ್ ರಚಿಸಿ ವಸ್ತುಗಳನ್ನು ಮಾರಾಟ ಮಾಡಿದರು,ಹಣ ವ್ಯವಹಾರಕ್ಕೆ ಕ್ಯೂ ಆರ್ ಕೋಡ್ ಬಳಕೆ ಮಾಡಿದರು. ಸೃಜನಾತ್ಮಕ ದರ ಪಟ್ಟಿಯನ್ನು ಪ್ರಸ್ತುತಪಡಿಸುವ ಮೂಲಕ ಆಧುನಿಕ ವ್ಯಾಪಾರ ತಂತ್ರದ ಅರಿವನ್ನು ಅರಿತುಕೊಂಡರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಕಯ್ಯ ಪೂಜಾರಿ ಅವರು ಚಿತ್ರಕಲಾ ಶಿಕ್ಷಕಿ ರಂಜನಾ ಅವರು ತಯಾರಿಸಿದ ಕಲಾಕೃತಿಯನ್ನು ಅನಾವರಣಗೊಳಿಸುವ ಮೂಲಕ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದರು.


ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ, ಸದಸ್ಯರಾದ ಪ್ರತಿಮ,ಜಯಶ್ರೀ, ಸುಮಿತ್ರಾ, ಕರುಣಾಕರ್,ಭೋಜ, ಶಿಕ್ಷಕರಾದ ಮಣಿತ,ವಿನೋದ, ಅಲ್ಫಿಯಾ,ತೇಜಶ್ರೀ,ನಿಷಾ,ಸುಚಿತ್, ಭಾಸ್ಕರ್,ಕೋಟಿ ಚೆನ್ನಯ ಸಂಘಟನೆಯ ಸ್ಥಾಪಕಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಎಸ್.ಡಿ.ಎಂ.ಸಿ.ನಿಕಟಪೂರ್ವಾದ್ಯಕ್ಷ ಪ್ರದೀಪ್ ಕುಮಾರ್, ಶಾಲಾ ಹಿತೈಷಿಗಳಾದ ಲಕ್ಷ್ಮಣ ಸುವರ್ಣ, ಶುಭಕರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿನುತ,ಸಹಶಿಕ್ಷಕಿ ಮಾರ್ಗರೆಟ್‌, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಿನಿ, ಗಣಿತ ಶಿಕ್ಷಕಿ ವಿದ್ಯಾ ಸಂದೀಪ್ ನಾಯಕ್,ಸಮಾಜವಿಜ್ಞಾನ ಶಿಕ್ಷಕಿ ವಿದ್ಯಾ ಟಿ, ವಿಜ್ಞಾನ ಶಿಕ್ಷಕಿ ಮಂಜುಳಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್,ಉಪಾಧ್ಯಕ್ಷ ಗಣೇಶ್, ಗ್ರಾ.ಪಂ.ಸದಸ್ಯರಾದ ಯಶೋಧ,ಆಶಾಲತಾ,ಸುಶೀಲ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಮೆಟ್ರಿಕ್ ಮೇಳ ಆಯೋಜಕರಾದ ಡಾ.ಆನಿ ಡಿಂಪಲ್ ಕ್ಯಾಸ್ತಲಿನೋ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top