ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ: ಕುಂಭಕಂಠಿಣಿ ಸಭಾಗೃಹ ಉದ್ಘಾಟನೆ

Picture of Namma Bedra

Namma Bedra

Bureau Report

ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ದೈವಸ್ಥಾನ, ಮಾರ್ನಾಡು ಇಲ್ಲಿ ದಾನಿಗಳ ನೆರವಿನಿಂದ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಅನ್ನಛತ್ರ ‘ಶ್ರೀ ಕುಂಭಕಂಠಿಣಿ ಸಭಾಗೃಹ’ ವನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ರಾಜೇಶ್ ಬಲ್ಲಾಳ್ ಅವರು ಶನಿವಾರ ಉದ್ಘಾಟಿಸಿದರು.
ಗ್ರಾಮದ ಅಸ್ರಣ್ಣರಾದ ಅನಂತ ಪದ್ಮನಾಭ ಅಸ್ರಣ್ಣ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೇಮರಾಜ್ ರಾವ್ ಬೆಂಗಳೂರು, ಶೇಖರ್ ಸಿದ್ದುಶೆಟ್ಟಿ ಕೆಂಪುಲು,ಗ್ರಾ.ಪಂ.
ಮಾಜಿ ಅಧ್ಯಕ್ಷ ವಾಸುದೇವ ಭಟ್,ಸದಾಶಿವ ಶೆಟ್ಟಿ ಕುಡ್ಡ,ಪಾಪಣ್ಣ ಪೂಜಾರಿ, ಶಂಭು ಶೆಟ್ಟಿ ಮಾರೂರು, ಇಂಜಿನಿಯರ್ ಸತೀಶ್ ಎ.ಆರ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಯೋಜನಾಧಿಕಾರಿ ಬಿ.ಧನಂಜಯ ಅತಿಥಿಗಳಾಗಿ ಭಾಗವಹಿಸಿದ್ದರು.


ಸಂಕ್ರಮಣ ದಿನದ ಅನ್ನಸಂತರ್ಪಣಾ ದಾನಿ ಹಾಗೂ ಅತೀ ಹೆಚ್ಚಿನ ದೇಣಿಗೆ ನೀಡಿದ ಶೇಖರ್ ಶೆಟ್ಟಿ ಕೆಂಪುಲು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾ.ಪಂ.ಮಾಜಿ ಸದಸ್ಯ ರಮೇಶ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಎ.ಯತೀಂದ್ರ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top