‘ಮೋಸದ ಜಾಲ’ ಕ್ಕೆ ಬಲಿಯಾದ ಇನ್ಸ್ಪೆಕ್ಟರ್. ಲಂಚ- ಮಂಚ ಸುಳ್ಳೇ ಸುಳ್ಳು !. ಷಡ್ಯಂತ್ರದ ಹಿಂದೆ ಅಮರ್, ಅಕ್ಬರ್, ಅಂತೋನಿ ?

Picture of Namma Bedra

Namma Bedra

Bureau Report

ಬೆದ್ರ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಕಳೆದೆರಡು ದಿನಗಳಲ್ಲಿ ರಾಜ್ಯದಾದ್ಯಂತ ಬಹಳಷ್ಟು ಸುದ್ದಿಯಾಗಿದ್ದಾರೆ.‌ಅದು ಮಹಿಳೆಯರಿಬ್ಬರು ಆರೋಪಿಸಿದ್ದ ಆರೋಪಗಳಿಂದಾಗಿ.
ಆದರೆ, ಆ ಮಹಿಳೆಯರು ಏನೆಲ್ಲಾ ಆರೋಪಗಳನ್ನು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ವಿರುದ್ಧ ಆರೋಪಿಸಿದ್ದರಾ ಅವು ಎಲ್ಲವೂ ಬರೇ ಸುಳ್ಳುಗಳೆಂದು ಸಾಬೀತಾಗಿದೆ. ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸಿಪಿ ಕೆ.ಶ್ರೀಕಾಂತ್ ಅವರು ನಡೆಸಿದ ವಿಚಾರಣೆಯಲ್ಲಿ ಆರೋಪ ಮಾಡಿದವರು ಫೈಲ್ ಆಗಿದ್ದಾರೆ. ಯಾಕೆಂದರೆ ಅವರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಲು, ಸಾಕ್ಷ್ಯ ಒದಗಿಸಲು ವಿಫಲರಾಗಿದ್ದಾರೆ.
ಸಂದೇಶ್ ಅವರು‌ ಲಂಚ ಕೇಳಿದ್ದಾರೆ, ಮಂಚಕ್ಕೆ ಕರೆದಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಗಳಿಗೆ ಯಾವ ಪುರಾವೆಗಳೂ ಇಲ್ಲ. ಯಾರೋ ಹೆಣೆದುಕೊಟ್ಟ ಪೊಟ್ಟುಕಥೆಗಳನ್ನು ಬೆಂಗಳೂರಿನ ಮಾಧ್ಯಮಗಳೆದುರು ಹೋಗಿ ಭಯಂಕರ ಸಂತ್ರಸ್ತರೆನ್ನುವ ರೀತಿಯಲ್ಲಿ ಹೇಳಿಕೊಟಟದ್ದನ್ನು ಚೆನ್ನಾಗಿ ಹೇಳಿದ್ದಾರೆ.ನಾಧ್ಯಮಗಳೂ ಅವರು ಹೇಳಿದ್ದೇ ಪರಮಸತ್ಯ ಎಂಬಂತೆ ದಿನವಿಡೀ ಬೊಬ್ಬೆ ಹಾಕಿದೆ. ಆದರೆ ಅದಕ್ಕೆಲ್ಲಾ ಸರಿಯಾದ ದಾಖಲೆಗಳು ಬೇಕಲ್ಲಾ ? ಯಾವ ಸಿಸಿಟಿವಿಗಳೂ,ಕಾಲ್ ಡಿಟೈಲ್ಸೂ ಅದಕ್ಕೆ ದಾಖಲೆಗಳನ್ನು ಒದಗಿಸಿಲ್ಲ.
ಇದರ ಹಿಂದೆ ಒಂದು ವ್ಯವಸ್ಥಿತ ಸಂಚು ಕಳೆದ ಐದಾರು ತಿಂಗಳಿಂದ ಸಂದೇಶ್ ಮಾನ ಹರಾಜು ಮಾಡಬೇಕು, ಹೇಗಾದರೂ ಮಾಡಿ ಸಸ್ಪೆಂಡ್ ಮಾಡಿಸಲೇಬೇಕು ಎನ್ನುವುದಕ್ಕೆ ಸ್ಕೆಚ್ ಹಾಕಿದೆ. ಅದರಲ್ಲವರು ತಾತ್ಕಾಲಿಕವಾಗಿ ಯಶಸ್ಸೂ ಆಗಿದ್ದಾರೆ.ಆದರೆ, ಯಾವ ಆರೋಪವೂ ಸಾಬೀತಾಗದೆ ಇರುವುದರಿಂದ ಸಂದೇಶ್ ಅವರು ಮತ್ತೆ ಇನ್ಸ್ಪೆಕ್ಟರ್ ಆಗಿ ಮುಂದುವರಿಯುವ ಸಾಧ್ಯತೆಗಳಿದೆ.
ಈಗ ತಾತ್ಕಾಲಿಕವಾಗಿ ಅಮಾನತುಗೊಂಡಿರುವುದು ‘ಭಯಂಕರ ‘ ಎಂದು ಪೋಸು ಕೊಟ್ಟು ಮಾಧ್ಯಮಗಳ ಮುಂದೆ ಮೊಸಳೆ ಕಣ್ಣೀರಿಟ್ಟ ನಾರೀಮಣಿಗಳ ಆರೋಪಕ್ಕಾಗಿ ಅಲ್ಲ.ಅವರ ಯಾವ ಆರೋಪದಲ್ಲೂ ಸತ್ಯಾಂಶ ಇಲ್ಲವೇ ಇಲ್ಲ.
ಟೋಟಲ್ಲಿಯಾಗಿ ಸುಮತಿ ನಾಯ್ಕ್ ಮತ್ತು ಪ್ರಫುಲ್ಲ ನಾಯ್ಕ್ ಸಹೋದರಿಯರಿಗೆ ಫ್ಯಾಮಿಲಿ ಮ್ಯಾಟರ್ ಇದ್ದು ಅದು ಠಾಣೆವರೆಗೂ ಹೋಗಿತ್ತು. ಅಂದರೆ ಪ್ರಫುಲ್ಲ ನಾಯ್ಕ್ ತಮ್ಮ ಗಂಡನ ವಿರುದ್ಧ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಅಗತ್ಯವಿಲ್ಲದೆ ಸುಮತಿ ನಾಯ್ಕ್ ಠಾಣೆಗೆ ಹೋಗಿ ಪೊಲೀಸರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿದಾಗ ಇದೇ ಇನ್ಸ್ಪೆಕ್ಟರ್ ಅವರು ಅವರನ್ನು ‘ ಅವರು ಗಂಡ- ಹೆಂಡತಿ ಮಧ್ಯೆ ನೀನೇಕೆ ಬರ್ತೀಯಾ?’ ಅಂತ ಹೊರಕಳುಹಿಸಿದ್ದರು.ಅದೇ ಒಂದು ಹಗೆ ಸುಮತಿ ನಾಯ್ಕ್ ಗೆ ಇದ್ದದ್ದು.ಅಲ್ಲದೆ ಸುಮತಿ ನಾಯ್ಕ್ ವಿರುದ್ಧ ಪ್ರಕರಣಗಳೂ ಇತ್ತು‌
ಮತ್ತೊಂದು ಪ್ರಕರಣ ವಂಚನೆಗೆ ಸಂಬಂಧಿಸಿದ್ದು.ತಾಕೊಡೆಯ ವ್ಯಕ್ತಿಯೊಬ್ಬ ಅದರಲ್ಲಿ ಆರೋಪಿ. ಆತನನ್ನು ಠಾಣೆಗೆ ಕರೆಸಿದ್ದಾರೆ.ಕೇಸೂ ದಾಖಲಿಸುತ್ತಾರೆ.ಆದರೆ ತನ್ನ ಗಂಡನಿಗೆ ಅನ್ಯಾಯವಾಯಿತೆಂದು ಆತನ ಪತ್ನಿ ಸಂದೇಶ್ ವಿರುದ್ಧ ಲಂಚದ ಆರೋಪ ಹೊರಿಸುತ್ತಾರೆ.
ಇದಲ್ಲದೆ ಇದೇ ಇನ್ಸ್ಪೆಕ್ಟರ್ ಅವರೊಂದಿಗೆ ಈ ಹಿಂದೆ ಇದ್ದ ವ್ಯಕ್ತಿಯೊಬ್ಬನೂ ಷಡ್ಯಂತ್ರದ ಸದಸ್ಯನೆಂದೂ, ಗ್ಯಾಂಗ್ ರೇಪ್ ಆರೋಪಿಯೊಬ್ಬ, ಹಲವು ಪ್ರಕರಣಗಳ ಮತ್ತೊಬ್ಬ ಆರೋಪಿ ಹಾಗೂ ಇನ್ನೊಬ್ಬ…ಹೀಗೆ ಎಲ್ಲ ‘ಫಲಾನುಭವಿಗಳು’ ಈ ಷಡ್ಯಂತ್ರದ ಹಿಂದಿನ ಸದಸ್ಯರೆಂದು ಹೇಳಲಾಗುತ್ತಿದೆ.
ಅವರಿಗೆಲ್ಲಾ ಇನ್ಸ್ಪೆಕ್ಟರ್ ವಿರುದ್ಧ ಹಗೆ ಇದ್ದು ಅದನ್ನು ನೇರವಾಗಿ ಎದುರಿಸಲಾಗದೆ ಈ ಮಹಿಳೆಯರನ್ನು ಮುಂದಿಟ್ಟುಕೊಂಡು ತಂತ್ರ ರೂಪಿಸಿದ್ದಾರಂಬ ಮಾತುಗಳು ಕೇಳಿ ಬರುತ್ತಿದೆ.
ಈ ‘ ಮೋಸದ ಜಾಲ’ ಇನ್ಸ್ಪೆಕ್ಟರ್ ಅವರನ್ನು ತಮ್ಮ ಮೋಸದ ಕತೆಗಳ ಮೂಲಕ ಸಸ್ಪೆಂಡ್ ಗೊಳಿಸಿದೆ ಎಂದು ಸಂಭ್ರಮಿಸಿರಬಹುದು.ಆದರೆ ಈ ಸಸ್ಪೆಂಡ್ ತಾತ್ಕಾಲಿಕ ಮತ್ತು ಅವರು ಹೆಣೆದ ಕಥೆಗಳಿಗಲ್ಲ.ಆದರೆ ಇಷ್ಟಕ್ಕೂ ಆ ಮೋಸದ ಜಾಲದ ಕೆಲಸಗಳೇ ಕಾರಣವಾಗಿರುವುದು ಸ್ಪಷ್ಟ.
ಇನ್ಸ್ಪೆಕ್ಟರ್ ಸಂದೇಶ್ ಅವರ ವಿರುದ್ಧದ ಅಪಪ್ರಚಾರಗಳನ್ನು ವೈಭವೀಕರಿಸುವವರು ಅವರು ಕಳೆದ ಮೂರು ವರ್ಷಗಳಲ್ಲಿ ಬೆದ್ರದಲ್ಲಿ ಅದೇನು ಬದಲಾವಣೆಗಳನ್ನು ಮಾಡಿದ್ದಾರೆ,ಅದ್ಹೇಗೆ ನಿಯಂತ್ರಿಸಿದ್ದಾರೆ? ಅದ್ಯಾರನ್ನೆಲ್ಲಾ ಜೈಲಿಗೆ ಕಳುಹಿಸಿದ್ದಾರೆ? ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು.‌ಅದನ್ನೆಲ್ಲಾ ಅರ್ಥ ಮಾಡಿಕೊಂಡವರಿಗೆ ಈ ಷಡ್ಯಂತ್ರದ ಹಿಂದಿನ ಅಸಲಿಯತ್ತು ಅರ್ಥವಾಗುತ್ತದೆ.
ಆದರೆ ಒಂದು ವ್ಯವಸ್ಥಿತ ಮೋಸದ ಜಾಲಕ್ಕೆ ಸಿಂಗಮ್ ಎನಿಸಿಕೊಂಡ ಇನ್ಸ್ಪೆಕ್ಟರ್ ಸಂದೇಶ್ ಅವರಂತಹ ದಕ್ಷ ಅಧಿಕಾರಿ ಬಲಿಯಾಗಿರುವುದು ಒಂದು ವಿಪರ್ಯಾಸವಾದರೆ, ಹಿಂದೆ ಬಜ್ಪೆಯಲ್ಲಿದ್ದಾಗ ಸಸ್ಪೆಂಡ್ ಆಗಿದ್ದರು, ಆಗ ಬಿಜೆಪಿ ನೇತೃತ್ವದ ಸರಕಾರವಿತ್ತು. ಈಗ ಬೆದ್ರದಲ್ಲಿ ಸಸ್ಪೆಂಡ್ ಆಗಿದ್ದಾರೆ- ಕಾಂಗ್ರೆಸ್ ಅಧಿಕಾರದಲ್ಲಿದೆ !
ಹಾಗಂತ ಸಂದೇಶ್ ಅವರು ಕಾಂಗ್ರೆಸ್, ಬಿಜೆಪಿ ಅಂತಾಗಲೀ, ಹಿಂದೂ ಮುಸ್ಲಿಂ ಕ್ರೈಸ್ತ ಅಂತ ನೋಡಿದವರೂ ಅಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ದಾರಿತಪ್ಪಿದವರಿಗೆ ತಮ್ಮ ಲಾಠಿರುಚಿ ತೋರಿಸಿ ಸರಿದಾರಿಗೆ ತಂದವರು, ಕ್ರೈಮ್ ಎಂದು ಹಾರಾಡಿದವರ ಹೆಡೆಮುರಿ ಕಟ್ಟಿದವರು, ಕೋಮು ಕ್ರಿಮಿಗಳ ಸದ್ದಡಗಿಸಿದವರು,ಕಾನೂನು ಕೈಗೆತ್ತಿಕೊಂಡವರ ಬೆಂಡೆತ್ತಿದವರು, ‘ ಸಂದೇಶ್ ‘ ಎಂಬ ಹೆಸರು ಕೇಳಿದೊಡನೇ ಪುಂಡು ಪೋಕರಿಗಳು ಮನೆ ಸೇರುವಷ್ಟು ಹೆದರಿಕೆ ಇರುವಂತೆ ಮಾಡಿದವರು. ಇದು ಕೆಲವರಿಗೆ ಹಿಡಿಸಿಲ್ಲ- ಅವರು ತಲೆಕೆಡಿಸಿಲ್ಲ. ಇಂತಹ ಡೈನಾಮಿಕ್ ಅಧಿಕಾರಿಗೇ ಒಂದು ಮೋಸದ ಕತೆಯಿಂದ ಅನ್ಯಾಯವಾಗಿದೆಯೆಂದರೆ ಅದು ಅವರಿಗೆ ಮಾತ್ರ ನಷ್ಟವಲ್ಲ- ಇಡೀ ಸಮಾಜಕ್ಕಾದ ನಷ್ಟ.
ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಅಧಿಕಾರಿಗಳಿಗೆ ಈರೀತಿಯ ಅನ್ಯಾಯ ಆಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಆದರೆ ನೆನಪಿರಲಿ, ಈ ಸಸ್ಪೆಂಡ್ ಎನ್ನುವುದು ಶಿಕ್ಷೆಯಲ್ಲ. ತಾತ್ಕಾಲಿಕವಾದ ಅಮಾನತು ಅಷ್ಟೆ.ಅವರ ಮೇಲಿನ ಯಾವ ಆರೋಪವೂ ಸಾಬೀತಾಗಿಲ್ಲ,ಹಾಗಾಗಿ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಲೂಬಹುದು. ಬೆದ್ರದ ಜನತೆ ಅದನ್ನೇ ನಿರೀಕ್ಷಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top