ಲಾಡಿ: ವ್ಯವಸ್ಥಾಪನಾ ಸಮಿತಿಗೆ ರವಿಪ್ರಸಾದ್ ಶೆಟ್ಟಿ ಪ್ರೆಸಿಡೆಂಟ್
ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಸಂಘಟಕ, ಕಲಾವಿದ, ವಿದ್ಯುತ್ ಗುತ್ತಿಗೆದಾರ ರವಿಪ್ರಸಾದ್ ಕೆ.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆಗೊಳಿಸಿ ಆದೇಶ ಹೊರಡಿಸಿದೆ.
ಪ್ರಶಾಂತ್, ರೇಣುಕಾ,ಸ್ಮಿತಾ , ಎಂ.ಗಣೇಶ್ ರಾವ್, ಪ್ರಸಾದ್ ದೇವಾಡಿಗ,ಸದಾನಂದ ಪೂಜಾರಿ ,ಗಿರೀಶ್ ಹಾಗೂ ಪ್ರಧಾನ ಅರ್ಚಕರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.










