ಮಾರೂರು ಹೊಸಂಗಡಿಯ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮಾರೂರುಗುತ್ತು ಶಂಭು ಎನ್.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಪ್ರಕಟಣೆಯಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಶಂಭು ಶೆಟ್ಟಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವೇ.ಮೂ. ವೆಂಕಟರಾಜ ಅಸ್ರಣ್ಣ ಪ್ರಧಾನ ಅರ್ಚಕರಾಗಿ , ವೇ.ಮೂ.ರಾಮದಾಸ ಅಸ್ರಣ್ಣ, ಶ್ರೀಮತಿ ಜ್ಯೋತಿಶ್ರೀ ಶೆಟ್ಟಿ, ಶ್ರೀಮತಿ ಮೋಹಿನಿ, ಶ್ರೀಧರ ಪೂಜಾರಿ, ಸಂತೋಷ್ ಪೂಜಾರಿ, ದೀಪಕ್ ಗೌಡ ಹಾಗೂ ಸುರೇಶ್ ದೇವಾಡಿಗ ಅವರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಶಂಭು ಶೆಟ್ಟಿ ಅವರು ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಎ.26 ರಿಂದ ಮೇ.1 ರವರೆಗೆ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದೆ.










