ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ: ತಾಯಿ-ಮಗ ಸಾವು

Picture of Namma Bedra

Namma Bedra

Bureau Report

ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತಾಯಿ ಮತ್ತು ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಮೂಡುಬಿದಿರೆಯಲ್ಲಿ ನಡೆದಿದೆ.
ಗಂಟಾಲ್ಕಟ್ಟೆಯ ಪ್ರೇಮ ಹಾಗೂ ಅವರ ಮಗ ಶೀನ ಈ ದುರಂತ ಘಟನೆಯಲ್ಲಿ ಸಾವನ್ನಪ್ಪಿದವರು.
‌ ಮೂಡುಬಿದಿರೆಯಿಂದ ಗಂಟಾಲ್ಕಟ್ಟೆಗೆ ಹೋಗುವಾಗ ಪೆಟ್ರೋಲ್ ಪಂಪ್ ಒಂದರ ಬಳಿ ಈ ದುರ್ಘಟನೆ ನಡೆದಿದೆ.
ತಾಯಿ ಸ್ಥಳದಲ್ಲೇ ಮೃತಪಟ್ಟರೆ ಮಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಒಂದೇ ಮನೆಯ ಅದರಲ್ಲೂ ತಾಯಿ ಮಗನ ಈ ದುರಂತ ಮರಣ ಆ ಮನೆ ಮತ್ತು ಪರಿಸರವನ್ನು ದುಖಸಾಗರದಲ್ಲಿ ಮುಳುಗಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top