ಗ್ರಾಮೋತ್ಸವ ಸಮಿತಿ ವಾಲ್ಪಾಡಿ ಹಾಗೂ ವಾಲ್ಪಾಡಿ ಮಾಡದಂಗಡಿ ಶಾಲೆಯ ಎಸ್.ಡಿ.ಎಂ.ಸಿ. ವತಿಯಿಂದ ಗ್ರಾಮೋತ್ಸವ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಇಂದು ಸಂಜೆ 7 ರಿಂದ ನಡೆಯಲಿದೆ.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭುವನಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜ,ಯುವ ಮುಖಂಡ ಅಶ್ವಥ್ ಪಣಪಿಲ, ನಾಗೇಶ್ ಬಂಗೇರ ಅಳಿಯೂರು, ಆಲ್ವಿನ್ ಪ್ರಕಾಶ್ ಡಿಸೋಜ, ಶರೀಫ್ ಎಂ.ಎಂ ಹಾಗೂ ಅಬೂಬಕ್ಕರ್ ಶಿರ್ತಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿವೃತ್ತ ಶಿಕ್ಷಕಿ ಲಿಡ್ವಿನ್ ಸಲ್ದಾನ್ಹ, ಹೊಟೆಲ್ ಸ್ಥಾಪಕ ಮಹಾಬಲ ಭಂಡಾರಿ, ರೆ.ಫಾ. ಅನಿಲ್ ಅವಿಲ್ಡ್ ಲೋಬೋ ವಾಲ್ಪಾಡಿ,ಯೂಸುಫ್ ವಾಲ್ಪಾಡಿ, ಪವರ್ ಮ್ಯಾನ್ ಅಬ್ದುಲ್ ರಹ್ಮಾನ್, ಪತ್ರಿಕಾ ವಿತರಕ ವಿಠಲ ಶೆಟ್ಟಿ ಹಾಗೂ ಅಂಗನವಾಡಿ ಶಿಕ್ಷಕಿ ಗುಣವತಿ ಅವರಿಗೆ ಗ್ರಾಮೋತ್ಸವ ಸನ್ಮಾನ ಕಾರ್ಯಕ್ರಮ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳಾದ ಅನಾಝ್, ತೇಜಸ್, ಯಶ್ವಿತ್ ,ಶ್ರೇಯಸ್, ಹಕೀಮ್, ಶಾಝಿನ್ ಹಾಗೂ ಅಭಿಲಾಷ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇದೆ.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣೇಶ್ ಬಿ.ಅಳಿಯೂರು ಅವರ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಅಗೆಲ್’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.










