ವಾಲ್ಪಾಡಿ ಗ್ರಾಮೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Picture of Namma Bedra

Namma Bedra

Bureau Report

ಗ್ರಾಮೋತ್ಸವ ಸಮಿತಿ ವಾಲ್ಪಾಡಿ ಇದರ ವತಿಯಿಂದ ಗ್ರಾಮೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಾಲ್ಪಾಡಿ ಮಾಡದಂಗಡಿ ಶಾಲಾ ಎಸ್‌ಡಿಎಂಸಿ ವತಿಯಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಮುಖಂಡ ಅಶ್ವಥ್ ಕೆ.ಪಣಪಿಲ, ಶಿರ್ತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೊ, ಉದ್ಯಮಿ ನಾಗೇಶ್ ಬಂಗೇರ, ಗ್ರಾ.ಪಂ.ಮಾಜಿ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಶ್ರೀಧರ ಬಂಗೇರ, ಉದ್ಯಮಿ ಶರೀಫ್ ಎಂ.ಎಂ, ಸಮಾಜ ಸೇವಕ ಅಬೂಬಕ್ಕರ್ ಶಿರ್ತಾಡಿ, ವಸಂತ ಪಂಚಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ನಿವೃತ್ತ ಶಿಕ್ಷಕಿ ಲಿಡ್ವಿನ್ ಸಲ್ದಾನ್ಹ, ನಯನಾಡು ಚರ್ಚ್ ಧರ್ಮಗುರುಗಳಾದ ಅನಿಲ್ ಅವಿಲ್ಡ್ ಲೋಬೋ ವಾಲ್ಪಾಡಿ, ಸೈಕಲ್ ರಿಪೇರಿಯ ಯೂಸುಫ್ ವಾಲ್ಪಾಡಿ, ಹೊಟೇಲ್ ಸ್ಥಾಪಕ ಮಹಾಬಲ ಭಂಡಾರಿ, ಪವರ್ ಮ್ಯಾನ್ ಅಬ್ದುಲ್ ರಹ್ಮಾನ್, ಅಂಗನವಾಡಿ ಶಿಕ್ಷಕಿ ಗುಣವತಿ ಹಾಗೂ ಪತ್ರಿಕಾ ವಿತರಕ ವಿಠಲ ಶೆಟ್ಟಿ ಅವರನ್ನು ಗ್ರಾಮೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಐದನೇ ತರಗತಿ ವಿದ್ಯಾರ್ಥಿಗಳಾದ ಅನಾಝ್, ಅಭಿಲಾಷ್, ತೇಜಸ್,ಯಶ್ವಿತ್, ಶ್ರೇಯಸ್,ಹಕೀಮ್ ಹಾಗೂ ಶಾಝಿನ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಆನಂದ, ಜನಾರ್ಧನ, ಮೋಹಿನಿ, ಶೇಖರ್, ಇರ್ಷಾದ್, ಶಿವರಾಮ, ಅಖಿಲೇಶ್,ಸುಕುಮಾರ್,ಗೋಪಾಲ , ಎಸ್ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಹಾಗೂ ಸಹಶಿಕ್ಷಕಿ ರಶ್ಮಿ ಎಂ.ಎಸ್.ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣೇಶ್ ಬಿ.ಅಳಿಯೂರು ಅವರ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ‌ ‘ ಅಗೆಲ್ ‘ ಎಂಬ ನಾಟಕ ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top