ಶ್ರೀ ಕಟಿಲೇಶ್ವರಿ ಕನ್ಸ್ಟ್ರಕ್ಷನ್ಸ್ ನ ಸ್ವಂತ ಕಚೇರಿ ಮೂಡುಬಿದಿರೆ ಪುರಸಭಾ ಕಚೇರಿ ಎದುರಿನ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದಲ್ಲಿ ಸೋಮವಾರ ಶುಭಾರಂಭಗೊಂಡಿತು.
ನ್ಯೂ ವೈಬ್ರೆಂಟ್ ವಿದ್ಯಾ ಸಂಸ್ಥೆಯ ಪಾಲುದಾರ ಶರತ್ ಗೋರೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಯು.ಕೆ.ಕನ್ಸ್ಟ್ರಕ್ಷನ್ಸ್ ನ ಇರ್ಫಾನ್ ಯು.ಕೆ, ಸಂತೋಷ್ ಶೆಟ್ಟಿ, ರೋನಿ ಫೆರ್ನಾಂಡಿಸ್, ಆನಂದ, ಹರೀಶ್ ವಿ.ದೇವಾಡಿಗ, ಡೆನ್ನಿಸ್, ಶ್ರೀಧರ ಬಂಗೇರ ಅಳಿಯೂರು, ಗಣೇಶ್ ಬಿ.ಅಳಿಯೂರು ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಶ್ರೀ ಕಟಿಲೇಶ್ವರಿ ಕನ್ಸ್ಟ್ರಕ್ಷನ್ಸ್ ನ ಮಾಲಕ ನಾಗೇಶ್ ಬಂಗೇರ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.






