ಕಾಂತಾವರ ರಾಮಯ್ಯ ಆಚಾರ್ಯ. ಈ ಹೆಸರು ಬಹುಶಃ ಇಂದಿನ ಜನತೆಗೆ ನೆನಪಿರಲಿಕ್ಕಿಲ್ಲ.
ಮೂಡುಬಿದಿರೆಯಲ್ಲಿ ಕಳೆದ ಆರು ದಶಕಗಳಿಂದ ಕಾಂತೇಶ್ವರ ಜ್ಯುವೆಲ್ಲರ್ಸ್ ಎಂಬ ಹೆಸರಿನ ಈ ಪರಿಸರದ ಜನಮೆಚ್ಚಿದ, ಜನರ ವಿಶ್ವಾಸಾರ್ಹವಾದ ಬಂಗಾರದಂಗಡಿಯಿದೆಯಲ್ಲಾ…ಆ ಜ್ಯುವೆಲ್ಲರ್ಸ್ ನ್ನು ಸ್ಥಾಪನೆ ಮಾಡಿದ್ದು ಇದೇ ರಾಮಯ್ಯ ಆಚಾರ್ಯ.
ಆರು ದಶಕಗಳಿಂದ ತನ್ನದೇ ಆದ ಗ್ರಾಹಕರನ್ನೊಳಗೊಂಡ ಕಾಂತೇಶ್ವರ ಜ್ಯುವೆಲ್ಲರ್ಸ್ ನ ಸುಸಜ್ಜಿತ ಮಳಿಗೆ ‘ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್’ ನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳಾದ ಡಾ.ಕೆ.ಜೀವಂಧರ ಬಲ್ಲಾಳ್ ಅವರು ರಾಮಯ್ಯ ಆಚಾರ್ಯ ಅವರನ್ನು ನೆನಪಿಸಿಕೊಂಡರು.
ರಾಮಯ್ಯ ಆಚಾರ್ಯ ಅವರು ಗಳಿಸಿದ್ದ ಗ್ರಾಹಕರ ನಂಬಿಕೆ ಮತ್ತು ಪ್ರೀತಿಯ ಪರಂಪರೆಯನ್ನು ಎರಡನೇ ಮತ್ತು ಮೂರನೇ ತಲೆಮಾರಿನವರು ಸಮರ್ಥವಾಗಿ ಮುಂದುವರಿಸಿಕೊಂಡು ಬಂದಿರುವುದು ಮತ್ತು ಈ ಹೊಸ ಕಟ್ಟಡಕ್ಕೆ ‘ ರಾಮಯ್ಯ ಕಾಂಪ್ಲೆಕ್ಸ್’ ಎಂದು ಹೆಸರಿಟ್ಟಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಜೈನಮಠದ ಸ್ವಾಮೀಜಿಯವರು, ಮಾಜಿ ಸಚಿವ ಅಭಯಚಂದ್ರ, ಡಾ.ಮೋಹನ ಆಳ್ವ,ಪಡ್ಯಾರಬೆಟ್ಟ ಕ್ಷೇತ್ರದ ಧರ್ಮದರ್ಶಿ ಜೀವಂಧರ ಕುಮಾರ್, ಎಂ.ಬಾಹುಬಲಿ ಪ್ರಸಾದ್,ಸಂಪತ್ ಸಾಮ್ರಾಜ್ಯ, ಪೆರಾಡಿ ಸಂಜೀವ ಶೆಟ್ಟಿ, ಸಂತೋಷ್ ಶೆಟ್ಟಿ ಕಡಂದಲೆ,ಹಸನಬ್ಬ ಪೆರಾಡಿ,ಕೆ.ಶ್ರೀಪತಿ ಭಟ್,ಕಾಂತೇಶ್ವರ ಜ್ಯುವೆಲ್ಲರ್ಸ್ ನ ದಿನೇಶ್ ಆಚಾರ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ನ ಸುರೇಶ್ ಆಚಾರ್ಯ ಮತ್ತು ಸಂಜನ್ ಆಚಾರ್ಯ ಸ್ವಾಗತಿಸಿದರು. ಸೌಮ್ಯ ಕುಂದರ್ ನಿರೂಪಿಸಿದರು.










