ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ನಿರ್ಮಿಸಲಾದ ನೂತನ ವಸತಿಗೃಹಗಳ ಕಟ್ಟಡವನ್ನು ದುಗ್ಗಲಡ್ಕ ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅವರು ಭಾನುವಾರ ಸಂಜೆ ಉದ್ಘಾಟಿಸಿದರು.
ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್, ಕಾರ್ಯದರ್ಶಿ ಝಕರಿಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಎಸ್ ಕೆ ಎಸ್ ಎಸ್ ಎಫ್ ವಾಲ್ಪಾಡಿ ಶಾಖೆಯ ಅಧ್ಯಕ್ಷ ಉಬೈದುಲ್ಲಾ, ಕಾರ್ಯದರ್ಶಿ ಜಮಾಲುದ್ದೀನ್, ವಾಲ್ಪಾಡಿ ಮಸೀದಿಯ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ, ಸದರ್ ಉಸ್ಮಾನ್ ಬಾಖವಿ, ಮುಅಝ್ಝಿನ್ ಹನೀಫ್ ಮುಸ್ಲಿಯಾರ್, ಮಕ್ಕಿ ಮಸೀದಿಯ ಖತೀಬರಾದ ಹನೀಫ್ ದಾರಿಮಿ, ಮುಅಝ್ಝಿನ್ ಇಸ್ಮಾಯಿಲ್ ಮುಸ್ಲಿಯಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಗರಿಬ್ ನಮಾಝ್ ಬಳಿಕ ನಾಲ್ಕನೇ ವಾರ್ಷಿಕ ಮಜ್ಲಿಸುನ್ನೂರ್ ದುಗ್ಗಲಡ್ಕ ತಂಙಳ್ ಅವರ ನೇತೃತ್ವದಲ್ಲಿ ನಡಯಿತು.
ಮಸೀದಿಯ ಮಾಜಿ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ,ದಾರುನ್ನೂರ್ ನ ಹುಸೈನ್ ರಹ್ಮಾನಿ, ಕಾಶಿಪಟ್ಣ ಮಸೀದಿಯ ಖತೀಬರಾದ ಎಸ್.ಅಬೂಬಕ್ಕರ್ ನಿಝಾಮಿ, ಮುಸ್ತಫಾ ಹನೀಫಿ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ದುಗ್ಗಲಡ್ಕ ತಂಙಳ್, ಹಜ್ ಯಾತ್ರೆಗೆ ತೆರಳಲಿರುವ ಹಸನಬ್ಬ ( ಬಾವುಞ್ಞಾಕ ), ಹಾಫಿಳ್ ಇಲ್ಯಾಸ್ ಮಕ್ಕಿ ಅವರನ್ನು ಸನ್ಮಾನಿಸಲಾಯಿತು.










