ಮೂಡುಬಿದಿರೆ: ತುಳುನಾಡ ಸಿರಿ ಮದಿಪು-2026 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಕರಗನೃತ್ಯ ಕಲಾವಿದ ವೆಂಕಟೇಶ ಬಂಗೇರರವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ನಟ ಅರವಿಂದ ಬೋಳಾರ್,
ಎಂಸಿಎಸ್ ಬ್ಯಾಂಕಿನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ. ಸಾಮ್ರಾಜ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಬಾಬು ಕೊರಗ ಪಾಂಗಾಳ, ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಉಪಸ್ಥಿತರಿದ್ದರು.
ಪ್ರಮುಖರಾದ ಡಾ. ರಾಧಾಕೃಷ್ಣ ಶೆಟ್ಟಿ, ವಿಜಯಲಕ್ಷ್ಮೀ, ಹರೀಶ್ ಮತ್ತು ಸಾಕ್ಷಿ ಶೆಟ್ಟಿ, ತುಳು ಸಂಘದ ಕಾರ್ಯದರ್ಶಿ ರಂಜಿತ್, ವಿದ್ಯಾರ್ಥಿ ಸಂಯೋಜಕರಾದ ರಶ್ಮಿತಾ, ಶಾರದಾ, ಚರಿತ್ರ, ನವ್ಯ, ಮೊಹಮ್ಮದ್, ಜುನೈದ್, ಸಂಶೋಧ್, ಶರಣ್, ನಿವೇದಿತಾ, ರಿತೇಶ್ ಮತ್ತು ಸುಜಿತ್ ಭಾಗವಹಿಸಿದ್ದರು.
ಕಾರ್ಯಕ್ರಮ ಮುಖ್ಯ ಸಂಯೋಜಕಿ ಪೂರ್ಣಿಮಾ ಸನ್ಮಾನ ಪತ್ರ ವಾಚಿಸಿದರು. ಮಂದಾರ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಮಿತಿಯ ಪ್ರವೀಣ್ ಭಂಡಾರಿ ವಂದಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ-ಸಾಹಿತ್ಯಿಕ ಕಾರ್ಯಕ್ರಮ “ತುಳುನಾಡ ಸಿರಿ ಮದಿಪು ಕಾರ್ಯಕ್ರಮ ನಡೆಯಿತು.










