ಮರೋಡಿಯ ನವೀಕೃತ ಮಸೀದಿ ನಾಳೆ ಉದ್ಘಾಟನೆ

Picture of Namma Bedra

Namma Bedra

Bureau Report

‌ ಬೆಳ್ತಂಗಡಿ ತಾಲೂಕು ಮರೋಡಿಯ ಮಾಲಿಕ್ ದೀನಾರ್ ಜುಮ್ಮಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನೆ ಹಾಗೂ ಖಾಝಿ‌ ಸ್ವೀಕಾರ‌ ಸಮಾರಂಭವು ನಾಳೆ ( ಶುಕ್ರವಾರ) ನಡೆಯಲಿದೆ.
ಮಧ್ಯಾಹ್ನ 12-15 ಕ್ಕೆ ದ.ಕ.ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ನವೀಕೃತ ಮಸೀದಿಯನ್ನು ಉದ್ಘಾಟಿಸಲಿದ್ದು 1 ಗಂಟೆಗೆ ಖುತುಬಾ ಪಾರಾಯಣ, ಜುಮ್ಮಾ ನಡೆಯಲಿದೆ.
ಇದೇ ಸಂದರ್ಭದಲ್ಲಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಖಾಝಿಯನ್ನಾಗಿ ಸ್ವೀಕರಿಸುವ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ಅಲ್ ಹಾದಿ ಸರ್ಫುದ್ದೀನ್ ತಂಙಳ್ ಸಾಲ್ಮರ ಅವರು ವಹಿಸಲಿದ್ದಾರೆ.
ಕುಂಬೋಲ್ ಸೈಯದ್ ಜಾಫರ್ ಸ್ವಾದಿಖ್ ತಂಙಳ್ ಅವರು ದುವಾ ನೆರವೇರಿಸಲಿದ್ದು ದಾರುನ್ನೂರ್ ಎಜುಕೇಶನ್ ಟ್ರಸ್ಟ್‌ ನ ಅಧ್ಯಕ್ಷರಾದ ಶರೀಫ್ ಹಾಜಿ ವೈಟ್ ಸ್ಟೋನ್ ಅವರು ಹಯಾತುಲ್ ಇಸ್ಲಾಂ ಮದರಸವನ್ನು ಉದ್ಘಾಟಿಸಲಿದ್ದಾರೆ. ಮಸೀದಿ ಮತ್ತು ಮದರಸ ಕಟ್ಟಡವನ್ನು ನಿರ್ಮಿಸಿದ ಎಂ.ಎ.ಅಬೂಬಕ್ಕರ್ ಮಾಸ್ತಿಕುಂಡು ಅವರನ್ನು ಸನ್ಮಾನಿಸಲಾಗುವುದು.
ಗುತ್ತಿಗೆದಾರ ಹಾಜಿ ಮುಸ್ತಫಾ, ಬಿ.ಎಸ್.ಅಸ್ಗರ್ ಆಲಿ,ಮುಹಮ್ಮದ್ ಹನೀಫ್ ಹಾಜಿ,ಉಸ್ಮಾನ್ ಹಾಜಿ,ಮೊಯ್ದಿನಬ್ಬ, ಅದ್ದು ಹಾಜಿ,ಹಾಸ್ಕೊ ಅಬ್ದುಲ್ ರಹ್ಮಾನ್ ಹಾಜಿ,ಸಮದ್ ಹಾಜಿ, ಸಂಶುದ್ದೀನ್ ಸುರಲ್ಪಾಡಿ, ಹಾಜಿ ಎಸ್.ಎಂ.ರಶೀದ್, ನಾಸಿರ್ ಲಕ್ಕಿ ಸ್ಟಾರ್,ಮಾಜಿ ಮೇಯರ್ ಅಶ್ರಫ್, ಪುತ್ತುಮೋನು,ಎಸ್.ಎ.ಅಬೂಬಕ್ಕರ್ ನಿಝಾಮಿ,ಅನ್ಸಾರ್,ಅಖ್ತರ್ ಹಾಜಿ,ಇಲ್ಯಾಸ್ ಹಾಜಿ,ಹುಸೇನ್ ರಹ್ಮಾನಿ,ರಶೀದ್ ಹುದವಿ,ಎಫ್.ಎ.ಜಲೀಲ್ ಹಾಜಿ ಸಹಿತ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.


ಸಂಜೆ 7 ಗಂಟೆಗೆ ಮಾಲಿಕುದ್ದೀನಾರ್ ಜುಮ್ಮಾ ಮಸೀದಿಯ ಅಧ್ಯಕ್ಷ ಫಕೀರಬ್ಬ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ಹರೀಶ್ ಪೂಂಜ, ರಕ್ಷಿತ್ ಶಿವರಾಮ್, ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ಇನಾಯತ್ ಆಲಿ,ದೇವೇಂದ್ರ ಹೆಗ್ಡೆ,ರೆ.ಫಾ.ಜೊರೊಮ್ ಡಿಸೋಜ, ಜಯಂತ ಕೋಟ್ಯಾನ್, ಸತೀಶ್ ಕಾಶಿಪಟ್ಣ, ಎಂ.ಎ.ಗಫೂರ್,ಕಿರಣ್ ಚಂದ್ರ ಪುಷ್ಪಗಿರಿ ಸಹಿತ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಮಸೀದಿ ಖತೀಬರಾದ ಅಬ್ದುಲ್ ಖಾದರ್ ಫಯಾಝ್ ನಹಿಮಿ ಅವರು ಉದ್ಘಾಟಿಸಲಿದ್ದು ಇಕ್ಬಾಲ್ ಬಾಳಿಲ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ಸಲಾಮ್ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top