ಶಾರ್ಜಾದಲ್ಲಿ ಕಾರು ಅಪಘಾತ: ಶಿರ್ತಾಡಿ ಮೂಲದ ಬಾಲಕಿ ಮೃತ್ಯು

Picture of Namma Bedra

Namma Bedra

Bureau Report

ಶಾರ್ಜಾ- ದುಬೈ ಬಾರ್ಡರ್ ನ ಅನ್ಸಾರ್ ಮಾಲ್ ಬಳಿ ಭಾನುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಶಿರ್ತಾಡಿ ಮೂಲದ ಬಾಲಕಿಯೋರ್ವಳು ಮೃತಪಟ್ಟಿದ್ದಾಳೆ.
ಶಿರ್ತಾಡಿಯ ದಿ.ಟಿ.ಆಲಿಯಬ್ಬ ಅವರ ಪುತ್ರ ಹಕೀಮ್ ಎಂಬವರ ಪುತ್ರಿ ಫಾತಿಮಾ ಅನಿಹಾ ( 5 ವ.) ಈ ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ಹಕೀಮ್ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬ ಕೂಡಾ ಅಲ್ಲೇ ವಾಸವಾಗಿದ್ದಾರೆ. ಭಾನುವಾರ ಶಾಪಿಂಗ್ ಮುಗಿಸಿ ವಾಪಾಸು ಬಂದು ತಮ್ಮ ಕಾರಲ್ಲಿ ಕೂರಲು ಸಿದ್ಧರಾದಾಗ ಹಿಂದಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ.ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆನ್ನಲಾಗಿದೆ.
ಫಾತಿಮಾ ಅನೀಹಾಳಿಗೆ ಮುಂಬರುವ ಜೂನ್ 2 ಕ್ಕೆ 5 ವರ್ಷ ಪೂರ್ಣವಾಗಲಿದೆ.ಅಲ್ಲದೆ ಆಕೆಯ ವೀಸಾ ಅವಧಿ ಕೂಡಾ ಈ ದಿನಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ. ಆದರೆ ಈ ನಡುವೆಯೇ ಆಕೆ ಮೃತಪಟ್ಟಿದ್ದಾಳೆ.
ಹಕೀಮ್ ಅವರಿಗೆ ಮೂವರು ಗಂಡು ಮಕ್ಕಳು ,ಒಬ್ಬಳು ಪುತ್ರಿ. ಈಕೆ ಕೊನೆಯವಳು.
ಅನೀಹಾಳ ಅಂತ್ಯಕ್ರಿಯೆ ಅಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top