ಭಾರೀ ಪ್ರಮಾಣದ ಸುಂಟರಗಾಳಿ ಮತ್ತು ಮಳೆಯಿಂದ ಪಡುಮಾರ್ನಾಡು ಗ್ರಾಮದ ಅಮನೊಟ್ಟು ಪರಿಸರದಲ್ಲಿ ಮರ, ಕಂಗುಗಳು ಧರೆಗುರುಳಿದ್ದು ಅಪಾರ ನಷ್ಟ ಸಂಭವಿಸಿದೆ.
ಇಂದು ಸಂಜೆ ವೇಳೆಯಲ್ಲಿ ಭರ್ಜರಿ ಸುಂಟರಗಾಳಿಯೊಂದಿಗೆ ಮಳೆರಾಯನ ಎಂಟ್ರಿಯಾಗಿದ್ದು ಆರಂಭದಲ್ಲೇ ಹಲವು ಕಂಗುಗಳು ,ಮರಗಳು ಧರೆಗುರುಳಿದೆ.




ಅಮನೊಟ್ಟುವಿನ ಸಂಜೀವಿ ಪೂಜಾರ್ತಿ ಅವರ ಮನೆ ಬಳಿ ಹಾನಿಯಾದರೆ,ಅದೇ ಪರಿಸರದ ಅಸ್ರಣ್ಣರ ತೋಟದ ಸುಮಾರು 100 ಕಂಗುಗಳು,ತೆಂಗಿನ ಮರಗಳು ಧರೆಗುರುಳಿದೆ. ಮುರಗೋಳಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಮೂರು ವಿದ್ಯುತ್ ಲೈನ್ ಗಳು ತುಂಡಾಗಿ ಕೆಳಬಿದ್ದಿದೆ, ಇನ್ನೂ ಹಲವೆಡೆ ಸಣ್ಣ ಪುಟ್ಟ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.




ಸಂಜೆ ನಾಲ್ಕರ ವೇಳೆಗೆ ಮಳೆ ಪ್ರಾರಂಭಗೊಂಡಿದ್ದು ಮೂಡುಬಿದಿರೆ, ಶಿರ್ತಾಡಿ ಸಹಿತ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ ಬಂದಿದೆ.
ದೇವಳಕಟ್ಟೆ ಶಾಲಿನಿ ಅವರ ಮನೆಯ ಶೀಟ್ ಗಳು ಸುಂಟರಗಾಳಿ ಗೆ ಸಂಪೂರ್ಣ ಹಾರಿಹೋಗಿದೆ.








































