ಪಟ್ಟಾಡಿಯಲ್ಲಿಂದು ಹಾಜಿ ಮಲಂಗ್ ಇಂಟರ್ ನ್ಯಾಷನಲ್ ಗರ್ಲ್ಸ್ ಕ್ಯಾಂಪಸ್ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಮೀಪದ ಹೊಸಂಗಡಿ ಪಟ್ಟಾಡಿ ಬಳಿ ನಿರ್ಮಿದಲಾದ ಹಾಜಿ ಮಲಂಗ್ ಇಂಟರ್ ನ್ಯಾಷನಲ್ ಗರ್ಲ್ಸ್ ಕ್ಯಾಂಪಸ್ ನ ನೂತನ ಕಟ್ಟಡದ ಉದ್ಘಾಟನೆ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ತ್ವಯಿಬಾ ಮರ್ಕಝ್ ಹಾಜಿ ಮಲಂಗ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಯ್ಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ,ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿಯವರಾದ ಎ.ಜೀವಂಧರ ಕುಮಾರ್,ಸೌದಿ ಅರೇಬಿಯಾದ ಅಯ್ಯೂಬ್ ಅಹ್ಮದ್,ಮಾಜಿ ಸಚಿವರಾದ ಬಿ.ರಮಾನಾಥ ರೈ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಯು.ಟಿ.ಇಫ್ತಿಕಾರ್ ಆಲಿ,ರಕ್ಷಿತ್ ಶಿವರಾಂ,ಇನಾಯತ್ ಆಲಿ, ಧರಣೇಂದ್ರ ಕುಮಾರ್,ಸತೀಶ್ ಬಂಗೇರ, ಎನ್.ಸೀತಾರಾಮ ರೈ, ಎಂ.ಜಯರಾಮ ಶೆಟ್ಟಿ, ಜಯರಾಜ್ ಕಂಬಳಿ,ಜಗದೀಶ್ ಹೆಗ್ಡೆ, ಪಿ.ಡಿ.ಒ.ಗಳಾದ ಕಾಂತಪ್ಪ, ಗಣೇಶ್ ಶೆಟ್ಟಿ,ಅಬ್ಬು ಕಾಕ ಮೂಡುಬಿದಿರೆ, ಶಂಕರ ಭಟ್ ಬಾಲ್ಯ ಹಾಗೂ ಆನಂದ ಬಂಗೇರ ಕೋಡಿಂಗೇರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top