ಬೆದ್ರ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಆಳ್ವಾಸ್ ಮಡಿಲಿಗೆ

Picture of Namma Bedra

Namma Bedra

Bureau Report

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ನೀಡುವ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ದ.ಕ.ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸೂಚಿಸಿದ್ದು ಅದರಂತೆ ಬೆಳ್ತಂಗಡಿ ಮತ್ತು ಬೆದ್ರ ಸಮುದಾಯ ಆಸ್ಪತ್ರೆಗಳು ಇನ್ನು ಆಳ್ವಾಸ್ ಹೆಲ್ತ್ ಸೆಂಟರ್ ನೊಂದಿಗೆ ಟೈ ಅಪ್ ಆಗಿ ಪ್ರೈವೇಟ್ & ಗವರ್ನಮೆಂಟ್ ಜಂಟಿಯಾಗಿ ಒಟ್ಟಿಗೆ ಕಾರ್ಯಾಚರಿಸಲಿದೆ.
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರವು ಎ.ಜೆ.ಆಸ್ಪತ್ರೆಯೊಂದಿಗೆ ಸೇರಿಕೊಂಡು ಸೇವೆ ನೀಡಲಿದೆ.
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಸುಪರ್ದಿಗೆ ಕೊಡಬಾರದು ಎಂದು ಸಿಪಿಐಎಂ ಸಹಿತ ಇತರ ಸಂಘಟನೆಗಳು ಬಲವಾಗಿ ವಿರೋಧಿಸಿತ್ತಾದರೂ ಇದೀಗ ಸರಕಾರವು ಮೇಲಿನಂತೆ ಆದೇಶಿಸಿ ಮೂರು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಮಡಿಲಿಗೆ ಹಾಕಿದೆ.
ಇನ್ನು ಮುಂದಕ್ಕೆ ಯಾವ ರೀತಿ ಸೇವೆ ಸಿಗಲಿದೆ? ಯಾವ ಯಾವ ವೈದ್ಯರು ಲಭ್ಯರಿರುತ್ತಾರೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
ಆರೋಗ್ಯ ರಕ್ಷಾ ಕೇಂದ್ರಕ್ಕೆ ನಿನ್ನೆಯಷ್ಟೇ ಸಮಿತಿ‌ ಸದಸ್ಯರನ್ನು ನೇಮಕಗೊಳಿಸಿ ಆದೇಶಿಸಿದ್ದು ಆ ಸಮಿತಿ ಯಾವ ರೀತಿ ಅಸ್ತಿತ್ವದಲ್ಲಿರಲಿದೆ? ಎನ್ನುವ ಪ್ರಶ್ನೆ ಕೂಡಾ ಇದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top