ಶಿರ್ತಾಡಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ನವೆಂಬರ್ 10 ರಂದು ನಡೆಯಲಿರುವ ವಿಶ್ವಶಾಂತಿ ಯಾಗದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಮೂಡುಕೊಣಾಜೆ ಸಂತೋಷ್ ಕೋಟ್ಯಾನ್ ಅವರು ಆಯ್ಕೆಯಾಗಿದ್ದಾರೆ.
ರುಕ್ಕಯ್ಯ ಪೂಜಾರಿ ಅಳಿಯೂರು, ಪ್ರದೀಪ್ ಕುಮಾರ್ ಆನೆಗುಡ್ಡೆ,ಪದ್ಮನಾಭ ಕೋಟ್ಯಾನ್ ಅಳಿಯೂರು, ಶ್ರೀಧರ ಬಂಗೇರ ಪಾಪ್ಲಾಡಿ,ಅಶ್ವಥ್ ಕೆ.ಪಣಪಿಲ,ಅಶ್ವಿನ್ ಕುಮಾರ್ ಮಾಂಟ್ರಾಡಿ, ಕೆ.ಸಿ.ಹರಿಶ್ಚಂದ್ರ ಕೊಣಾಜೆ,ಸುಧಾಕರ ಸುವರ್ಣ ವಾಲ್ಪಾಡಿ,ಉದಯ ಕೋಟ್ಯಾನ್ ಪಣಪಿಲ ಹಾಗೂ ಸದಾನಂದ ಸುವರ್ಣ ಅವರು ಈ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಯಾಗ ಸಮಿತಿಯ ಸಂಚಾಲಕರಾದ ವಿಶ್ವನಾಥ ಕೋಟ್ಯಾನ್ ಹನ್ನೇರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
