ಇದು ಬೆದ್ರದ ಆಳ್ವಾಸ್ ರಸ್ತೆ. ಮೊದಲ ಬರ್ಸಕ್ಕೇ ಈರೀತಿಯಾದರೆ ಇನ್ನು ಮಳೆಗಾಲದಲ್ಲಿ ಹೇಗಿರಬಹುದು ?
ಇದು ಪ್ರತಿನಿತ್ಯ ಬ್ಯುಸೀ ರಸ್ತೆ. ಇಲ್ಲಿ ಒನ್ ವೇ- ಟೂವೇ- ಹೈವೇ …ಇದ್ಯಾವುದೂ ಲೆಕ್ಕಕ್ಕಿಲ್ಲ. ಒಟ್ರಾಸಿ ಹೋಗುವ,ಬರುವ ವಾಹನಗಳ ಸಂಖ್ಯೆಯೇ ಹೆಚ್ಚು. ಇಲ್ಲಿ ಏನಾದರೂ ಪರ್ಚೇಸ್ ಮಾಡಲಿಕ್ಕಿದ್ದರೆ ಕೆಲವು ವಾಹನಗಳು ಜಾಗವನ್ನು ಪರ್ಚೇಸ್ ಮಾಡಿದೆಯೆಂಬಂತೆ ಗಂಟೆಗಟ್ಟಲೆ ಪಾರ್ಕಿಂಗ್ ಮಾಡುತ್ತದೆ. ಮೊದಲೇ ಇಕ್ಕಟ್ಟಾದ ರಸ್ತೆ.ಕೆಲವೊಮ್ಮೆ ವಾಹನಗಳ ಕಿರಿಕಿರಿಯಿಂದ ‘ ಕಣ್ಣ್ ತೋಜುಜಾ, ಕೆಬಿ ಕೇನುಜಾ’ ಎಂಬ ಆರೋಗ್ಯ ವಿಚಾರಿಸುವವರಿದ್ದಾರೆ.
ಆಳ್ವಾಸ್ ಆಸ್ಪತ್ರೆಗೆ ಹೋಗಬೇಕಾದರೆ ಈ ರಸ್ತೆಯ ಮೂಲಕವೂ ಹೋಗಬಹುದು. ಕೆಲವು ಗಾಯಾಳುಗಳನ್ನು, ಅಸೌಖ್ಯದಲ್ಲಿರುವವರನ್ನು ಕರೆದುಕೊಂಡು ಹೋಗಬೇಕಾದರೆ ಟ್ರಾಫಿಕ್ ಜಾಮ್ ಕಿರಿಕಿರಿ.
ವಿಷಯ ಅದಲ್ಲ, ಇಲ್ಲಿ ಹಲವು ಅಂಗಡಿಗಳಿದೆ, ಬ್ಯಾಂಕ್ ಇದೆ.ಸಾರ್ವಜನಿಕರು, ವಿದ್ಯಾರ್ಥಿಗಳು ಎಂದು ದಿನಂಪ್ರತಿ ಸಾವಿರಾರು ಜನ ಓಡಾಡುವ ರಸ್ತೆಯಿದು.
ಮೊದಲ ಮಳೆಗೇ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಬ್ಲಾಕ್ ಆಗಿ ಕೆರೆಯಂತಾಗುತ್ತದೆ.
ತುಂಬಾ ಮಂದಿ ಇಲ್ಲಿನ ಸಮಸ್ಯೆ ಬಗ್ಗೆ ಪುರಸಭೆಗೆ ಮನವರಿಕೆ ಮಾಡಿದ್ದಾರೆ, ಆದರೆ ಅದು ಅವರಿಗೆ ಅರ್ಥವಾದಂತಿಲ್ಲ.
‘ ಇಂದು’, ನಾಳೆ ಅಂತ ದಿನ ದೂಡಿರುವುದರಿಂದಲೇ ಈದಿನ ಇಲ್ಲಿ ‘ ಬೆದ್ರಕೆರೆ’ಯಾಗಿರುವುದು.
ಬರ್ಸ ಒಂತೆ ಕಡಿಮೆಯಾದಮೇಲೆಯಾದರೂ ಪುರಸಭೆಯವರು ಇಲ್ಲಿಗೊಮ್ಮೆ ಕೊಟ್ಟು ಪಿಕ್ಕಾಸು ಕಳುಹಿಸಲೇಬೇಕು.!






