ಸಾರಾ ಇಬ್ರಾಹಿಂ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪಡ್ಡಂದಡ್ಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Picture of Namma Bedra

Namma Bedra

Bureau Report

ಪೆರಿಂಜೆಯ ಸಾರಾ ಇಬ್ರಾಹಿಂ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪಡ್ಡಂದಡ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಪಿ.ಎಸ್.ಶಬೀರ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಸ್ಥಾಪಕ ಸದಸ್ಯ ಶಂಕರ್ ಭಟ್ ಬಾಲ್ಯ ಅವರು ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿ ‘ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು, ಪ್ರತಿಷ್ಠೆಗೋಸ್ಕರ ದೂರದ ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸದೆ ತಮ್ಮ ಮಕ್ಕಳನ್ನು ಸರಕಾರಿ ಶಾಕೆಗಳಿಗೇ ಕಳುಹಿಸಿದ್ದಲ್ಲಿ ಒಳ್ಳೆಯ ವಿದ್ಯಭ್ಯಾಸ, ಸಂಸ್ಕಾರ ಸಿಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರು ಮಾತನಾಡಿ ‘ ನಮ್ಮ ಟ್ರಸ್ಟ್ ವಿದ್ಯೆಗೆ ಪ್ರಥಮ ಆದ್ಯತೆ ನೀಡುತ್ತಿದೆ,ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ನೀಡಲು ಸಂತೋಷವಾಗುತ್ತಿದೆ’ ಎಂದರು.
ಶಾಲಾ ಸ್ಥಾಪಕ ಸದಸ್ಯ ಇಸ್ಮಾಯಿಲ್ ಗಾಂಧಿನಗರ,ಪತ್ರಕರ್ತ ಎಚ್.ಮುಹಮ್ಮದ್ ವೇಣೂರು, ಅರುಣ್ ಪೂಜಾರಿ ಜಾರಿಗೆದಡಿ,ಉಮರ್ ಕೆ., ರಹ್ಮಾನ್ ಪೆರಿಂಜೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಮುಖ್ಯ ಶಿಕ್ಷಕಿ ಕಮಲಮ್ಮ ಸ್ವಾಗತಿಸಿ ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು. ಶಿಕ್ಷಕಿ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು.
ಎಸ್.ಡಿ.ಎಂ.ಸಿ‌.ಉಪಧ್ಯಕ್ಷೆ ರೇಖಾ,ಪೆರಿಂಜೆಯ ಬುಲೆಟ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಹಾಗೂ ಶಾಲಾಭಿವೃದ್ಧಿ ಯೋಜನೆಗಳಲ್ಲಿ ಸಹಕರಿಸಿದ ಅರುಣ್ ಪೂಜಾರಿ ಜಾರಿಗೆದಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top