ಹಾಸ್ಯ ಕಲಾವಿದ ಮಾಧವ ಗಟ್ಟಿ ಪಿಲಿಯೂರು ನಿಧನ

Picture of Namma Bedra

Namma Bedra

Bureau Report

ಮಂಜೇಶ್ವರ : ತಾಲೂಕಿನ ವರ್ಕಾಡಿ ಕೂಟತ್ತಜೆಯ ಮಾಧವ ಗಟ್ಟಿ ಪಿಲಿಯೂರು ಅವರು (62) ಅಸೌಖ್ಯದಿಂದ ಜೂ.15 ರಂದು ನಿಧನ ಹೊಂದಿದರು. ಪತ್ನಿ ಉಮಾ, ಮಕ್ಕಳಾದ ಅಕ್ಷತಾ, ಅಕ್ಷಯ್ ಸೇರಿದಂತೆ ಅಪಾರ ಬಂಧು -ಮಿತ್ರ ವರ್ಗವನ್ನು ಅವರು ಅಗಲಿದ್ದಾರೆ .
ಕೃಷಿಕರಾಗಿದ್ದ ಅವರು, ಗಟ್ಟಿ ಸಮಾಜದ ವರ್ಕಾಡಿ ಮಾಗಣೆಯ ಗುರಿಕ್ಕಾರರಾಗಿದ್ದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು, ಉತ್ತಮ ನಾಟಕ ಕಲಾವಿದರಾಗಿದ್ದರು.ಆರತಿ, ಗೀತಾ ಅತ್ತ್ ಸೀತಾ, ಸೂರ್ಯಕಾಂತಿ ಸೇರಿದಂತೆ ಹತ್ತು ಹಲವು ನಾಟಕಗಳಲ್ಲಿ ಅವರು ನಿರ್ವಹಿಸಿದ ಹಾಸ್ಯ ಪಾತ್ರಗಳು ಅಪಾರ ಜನಮನ್ನಣೆಗಳಿಸಿದ್ದವು.
ಎಲ್ಲರೊಂದಿಗೆ ಆತ್ಮೀಯ ಒಡನಾಟ, ಬಾಂಧವ್ಯ ಹೊಂದಿದ್ದ ಅವರು, ‘ಮಾದಣ್ಣ’ ಎಂದೇ ಜನಾನುರಾಗಿಯಾಗಿದ್ದರು.
ಅವರ ಅಕಾಲಿಕ ನಿಧನಕ್ಕೆ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ಸೇವಾ ಸಮಿತಿ ಸಹಿತ, ಸ್ಥಳೀಯ ಹಲವು ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top