ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮರೋಡಿಯ ಯುವಕ ಮೃತ್ಯು

Picture of Namma Bedra

Namma Bedra

Bureau Report

ಕಳೆದ ಸೋಮವಾರ ಅಳಿಯೂರು ಸಮೀಪ ನಡೆದ ಬೈಕ್- ಆಕ್ಟಿವಾ ಢಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಮರೋಡಿಯ ಭಾಸ್ಕರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮರೋಡಿಯವರಾಗಿರುವ ಭಾಸ್ಕರ್ ಕೆಲ್ಲಪುತ್ತಿಗೆ ಬಳಿ ಇರುವ ತನ್ನ ಹೆಂಡತಿಯ ಮನೆಗೆ ಹೋಗುವಾಗ ಅಪಘಾತ ಸಂಭವಿಸಿತ್ತು.
ಪರಸ್ಪರ ಮುಖಾಮುಖಿಯಾಗಿ ಢಿಕ್ಕಿಯಾಗಿದ್ದರಿಂದ ಭಾಸ್ಕರ ಅವರ ತಲೆಗೆ ಗಂಭೀರವಾದ ಗಾಯಗಳಾಗಿತ್ತು.
ಕೂಡಲೇ ಅಳಿಯೂರು ಪರಿಸರದ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು.
ಅದೇ ದಾರಿಯಾಗಿ ಬರುತ್ತಿದ್ದ ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯ ರಾಜೇಶ್ ನಾಯ್ಕ್ ಹಾಗೂ ಬಾರ್ ಮಾಲಕ ಮನೋಹರ್ ಶೆಟ್ಟಿ ಅವರು ತಮ್ಮ ವಾಹನದಲ್ಲಿ ಆಳ್ವಾಸ್ ಗೆ ದಾಖಲಿಸಿದ್ದರು.
ಇನ್ನೊಬ್ಬ ಗಾಯಾಳು ಮಕ್ಕಿಯ ಚೇತನ್ ಅವರು ಚೇತರಿಸಿಕೊಂಡಿದ್ದು ಭಾಸ್ಕರ್ ಅವರು ಶುಕ್ರವಾರ ಮೃತಪಟ್ಟಿದ್ದಾರೆ.
ತೀರಾ ಬಡತನದಲ್ಲಿದ್ದ ಭಾಸ್ಕರ್ ಅವರಿಗೆ ಒಂದು ಮಗುವಿದೆ.ಪತ್ನಿ ಗರ್ಭವತಿಯಾಗಿದ್ದು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ,ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಹೊರಟಿದ್ದ ಭಾಸ್ಕರ್ ತಾನೇ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top