ಬೆದ್ರ ಬಸ್ ಸ್ಟಾಂಡಲ್ಲಿ ಯುವಕನ ತಲವಾರು ಶೋ

Picture of Namma Bedra

Namma Bedra

Bureau Report

ಬಿ.ಸಿ.ರೋಡಲ್ಲಿ ಚೂರಿಯಿಂದ ಯುವತಿಯೋರ್ವಳನ್ನು ಇರಿದು ಕೊಲೆಗೈದ ಘಟನೆಯ ಬೆನ್ನಲ್ಲೇ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಯುವಕನೋರ್ವ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ಪ್ರಸಂಗವು ಕೆಲಸಮಯ ಆತಂಕಕ್ಕೆ ಕಾರಣವಾಯಿತು.


ಬಸ್ಸು ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತಲವಾರು ಹಿಡಿದುಕೊಂಡು ಹೋದ ಯುವಕ ನೇರವಾಗಿ ಮೊಬೈಲ್ ಅಂಗಡಿಯವರಲ್ಲಿ ಗಲಾಟೆಗಿಳಿದಿದ್ದಾನೆ.ಗ್ರಾಹಕರು ಇರುವಾಗಲೇ ತಲವಾರು ಝಳಪಿಸಿದ ಯುವಕನನ್ನು ಅಲ್ಲಿನ ಕೆಲ ಯುವಕರು ಉಪಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮೊದಲು ಪೆರಿಂಜೆಯವನು ಅಂತ ಹೇಳಿದ ಯುವಕ ಮತ್ತೊಮ್ಮೆ ತನಗೆ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿದ್ದಾನೆ ಎಂದು ಹೇಳಿದ್ದಾನೆನ್ನಲಾಗಿದೆ.
ಆತ ಕೈಯಲ್ಲಿ ತಲವಾರು ಹಿಡಿದುಕೊಂಡು ಮೊಬೈಲ್ ಅಂಗಡಿ ಹೋಗುವುದು ಮತ್ತು ಮೊಬೈಲ್ ಅಂಗಡಿಯವರಲ್ಲಿ ಜಗಳ ಮಾಡುವ ವೀಡಿಯೋ ವೈರಲ್ ಆಗಿದೆ.
ಪೊಲೀಸರು ಈ ಯುವಕನನ್ನು ಸರಿಯಾಗಿ ವಿಚಾರಣೆ ನಡೆಸುತ್ತಿದ್ದು ಸತ್ಯ ಸಂಗತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top