ಶನಿವಾರ ಮಧ್ಯಾಹ್ನ ಬೆದ್ರ ಬಸ್ ಸ್ಟಾಂಡಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ ತಲವಾರು ಬೀಸಿ ಗಾಬರಿ ಸೃಷ್ಟಿಸಿದ ಯುವಕ ಪೆರಿಂಜೆ ಸಮೀಪದ ಬಡಕೋಡಿಯ ರಾಜೇಶ ಎಂದು ತಿಳಿದು ಬಂದಿದೆ.
ಮೊಬೈಲ್ ಅಂಗಡಿಗೆ ನುಗ್ಗಿ ಸಿಬ್ಬಂದಿಗಳಿಗೆ ತಲವಾರು ಬೀಸಿ ಶೋ ನಡೆಸಿದ ಈತನನ್ನು ಮೊಬೈಲ್ ಅಂಗಡಿಯ ಹುಡುಗರೇ ಉಪಾಯದಿಂದ ಲಾಕ್ ಮಾಡಿ ಪೊಲೀಸರಿಗೊಪ್ಪಿಸಿ ಧೈರ್ಯ ತೋರಿದ್ದಾರೆ.
ವಿಚಾರಣೆಯ ವೇಳೆ ಆತ ತಾನು ವಾಮದಪದವಿನವನಾಗಿದ್ದು ಪ್ರಸ್ತುತ ಪೆರಿಂಜೆಯ ಬಡಕೋಡಿ ಎಂಬಲ್ಲಿ ವಾಸವಿರುವುದಾಗಿ ತಿಳಿಸಿದ್ದಾನೆ . ತನಗೆ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿರುವುದಾಗಿ ತಿಳಿಸಿದ್ದಾನೆಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಸಂದೇಶನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡರಸುತ್ತಿದ್ದಾರೆ.






