‘ಕೆಸರ್ದ ಗೊಬ್ಬು’ ಕಾರ್ಯಕ್ರಮವನ್ನು ಆಯೋಜಿಸಿ ಅದರಲ್ಲಿ ಉಳಿತಾಯಗೊಂಡ ಹಣವನ್ನು ಬಡ ರೋಗಿಗಳಿಬ್ಬರ ಚಿಕಿತ್ಸೆಗೆ ನೀಡಿ ಮಾದರಿಯಾಗಿದ್ದಾರೆ ಕೊಡ್ಯಡ್ಕದ ತುಳುವೆರೆ ಬಳಗದ ಸದಸ್ಯರು.
ನೆಲ್ಲಿಗುಡ್ಡೆಯ ವಿಶ್ವನಾಥ ಪೂಜಾರಿ ಅವರ ಚಿಕಿತ್ಸೆಗೆ ಹತ್ತು ಸಾವಿರ ಹಾಗೂ ಕಂಚಿಬೈಲು ಸರಸಕ್ಕ ಅವರ ಚಿಕಿತ್ಸೆಗೆ ಹತ್ತು ಸಾವಿರ ಧನಸಹಾಯವನ್ನು ನೀಡಲಾಯಿತು.

ಅಶೋಕ್ ಹೆಗ್ಡೆ, ವಾಸುದೇವ ಪಿ.ನಾಯಕ್, ಶಶಿಧರ ಪಿ.ನಾಯಕ್, ಸುಚರಿತ ಶೆಟ್ಟಿ, ಸುಕೇಶ್ ನಾಯ್ಕ್, ಪ್ರೇಮ್, ಸುರೇಶ್ ನಾಯ್ಕ್,ವೆಂಕಟೇಶ್, ರಾಜೇಶ್,ರಾಜೇಶ್ ಪೂಜಾರಿ, ಅರುಣ,ಪ್ರಶಾಂತ್ ಭಂಡಾರಿ, ಜಗದೀಶ್ ಶೆಟ್ಟಿ, ರಾಘು, ಗಣೇಶ್ ಪೂಜಾರಿ, ಸತೀಶ್ ನಾಯ್ಕ್, ನವೀನ್ ಕೊಡ್ಯಡ್ಕ ಮುಂತಾದವರು ಸಹಕರಿಸಿದರು.






