ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಬೆದ್ರ ಕಾಂಗ್ರೆಸ್ ಪ್ರತಿಭಟನೆ *ಹಿಟ್ಲರ್ ನಂತಹ ಸರ್ವಾಧಿಕಾರಿ ಆಡಳಿದ ಕೊನೆಗಾಲ

Picture of Namma Bedra

Namma Bedra

Bureau Report

ನೀಟ್ ಅಕ್ರಮ ಪ್ರಶ್ನಿಸಿ ಧ್ವನಿಯೆತ್ತಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ,ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದೆದುರು ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಅವರು ಮಾತನಾಡಿ ‘ ಉಜ್ವಲ ಭವಿಷ್ಯದ ಕನಸು ಕಂಡ ದೇಶದ ಅದೆಷ್ಟೋ ವಿದ್ಯಾರ್ಥಿಗಳು ನೀಟ್ ಪರೋಕ್ಷೆಯಲ್ಲಿ ತಮಗಾದ ಅನ್ಯಾಯವನ್ನು ಪ್ರಶ್ನಿಸಲು ಹೋದರೆ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯಾವರೀತಿ ಹಿಂಸೆ ನೀಡಿದೆ ಎನ್ನುವುದು ಜನರಿಗೆ ಗೊತ್ತಿದೆ,ನಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಖಂಡನೀಯ,ಇದನ್ನು ಕಾಂಗ್ರೆಸಿಗರು ಸಹಿಸುವುದಿಲ್ಲ’ ಎಂದರು.
ಮಿಥುನ್ ರೈ ಅವರು ಮಾತನಾಡಿ ‘ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೂ ನೀಟ್ ಪರೀಕ್ಷೆಯಿಂದ ಅನ್ಯಾಯವಾಗಿದೆ,ಅನ್ಯಾಯವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಮೋದಿ ಸರಕಾರವು ಸರ್ವಾಧಿಕಾರಿಯಂತೆ ಹಿಂಸೆ ನೀಡುತ್ತಿದೆ, ನಮ್ಮ ನಾಯಕರನ್ನೂ ಬಂಧಿಸಲಾಗಿದೆ, ವಿದ್ಯಾರ್ಥಿಗಳ ಬೇಡಿಕೆಗೆ ಕೇಂದ್ರ ಸರಕಾರವು ಸ್ಪಂದಿಸಬೇಕು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು, ಜಿಲ್ಲೆಯ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಕಾಂಗ್ರೆಸ್ ಮತ್ತೆ ಪ್ರತಿಭಟಿಸಲಿದೆ, ಹಿಟ್ಲರ್ ನಂತೆ ಸರ್ವಾಧಿಕಾರಿಯಂತೆ ವರ್ತಿಸುವ ಮೋದಿ ಸರಕಾರದ ಕೊನೆಗಾಲ ಸಮೀಪಿಸುತ್ತಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ,ಪ್ರಮುಖರಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್,ರುಕ್ಕಯ್ಯ ಪೂಜಾರಿ,ಜೊಸ್ಸಿ ಮಿನೇಜಸ್, ರಮೇಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಇಕ್ಬಾಲ್ ಕರೀಮ್, ಟಿ.ಎನ್‌.ಕೆಂಬಾರೆ, ಸತೀಶ್ ಕೋಟ್ಯಾನ್, ರೆಕ್ಸನ್ ಪಿಂಟೊ, ಪ್ರವೀಣ್ ಇರುವೈಲ್, ಕುಮಾರ್ ಪೂಜಾರಿ, ಪ್ರದೀಪ್ ಇರುವೈಲ್, ದಿನೇಶ್ ಪ್ರಭು ಇರುವೈಲ್, ಪ್ರಶಾಂತ್ ಅಮೀನ್,ಸವಿತಾ ಟಿ.ಎನ್, ಸುಪ್ರಿಯಾ ಡಿ.ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ಹರೀಶ್ ಆಚಾರ್ಯ, ಪುರುಷೋತ್ತಮ ನಾಯಕ್,ಅನೀಶ್ ಡಿಸೋಜ,ಪಿ.ಕೆ.ಥೋಮಸ್, ಕೊರಗಪ್ಪ, ವಲೇರಿಯನ್ ಸಿಕ್ವೇರಾ, ಶೇಖರ್ ಬೊಳ್ಳಿ, ಸತೀಶ್ ಭಂಡಾರಿ,ಸುರೇಶ್ ಕೋಟ್ಯಾನ್, ವರುಣ್, ಲತೀಫ್,ಅಶ್ರಫ್ ಮರೋಡಿ, ಸಲಾಮ್ ಹೊಸಂಗಡಿ,ಗಣೇಶ್ ಶೆಟ್ಟಿ, ಶಾಬಾಝ್ ಬೆಳುವಾಯಿ, ಹಿಮಾಯತ್, ಮತ್ತಿತರರು ಉಪಸ್ಥಿತರಿದ್ದರು.
ಜೈಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top