ಡಿ.ಕೆ. ಜಿಸಿಸಿ ಕೋ-ಆರ್ಡಿನೇಶನ್ ಕಮಿಟಿ ವತಿಯಿಂದ ನಗರದ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಕ್ಫ್ ಸಂಸ್ಥೆಗಳ ಆಸ್ತಿ ನೋಂದಣಿ ದಾಖಲೆಪತ್ರಗಳನ್ನು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ ಸೇರಿದಂತೆ ಜಿಲ್ಲೆಯ ಸುಮಾರು 80 ಕ್ಕೂ ಹೆಚ್ಚು ಮಸೀದಿಗಳ ದಾಖಲೆ ಸರಿಪಡಿಸುವಿಕೆ ಹಾಗೂ ನೊಂದಣೆ ಕಾರ್ಯವನ್ನು DK GCC ಸಮಿತಿ ವತಿಯಿಂದ ನಡೆಸಿಕೊಡಲಾಯಿತು.
ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಯ ಶಿಫಾರಸಿನಂತೆ ಸಂಗಬೆಟ್ಟು ಎಳಿಯಾ ಮಸೀದಿ ಹಾಗೂ ಮೂಡಬಿದ್ರೆ ಈದ್ಗಾ ಮಸೀದಿ ಸ್ಥಿರಾಸ್ತಿ ನೊಂದಣೆ ಗೆ ಸಂಬಂಧಿಸಿದಂತೆ DK GCC ಸಮಿತಿಯು ಸಹಕಾರ ನೀಡಿದ್ದು ಕಾರ್ಯಕ್ರಮದಲ್ಲಿ ದಾಖಲೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ಉಧ್ಯಮಿ ಝಕರಿಯಾ ಜೋಕಟ್ಟೆ ಇವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಾಸೀರ್ ಲಕ್ಕಿಸ್ಟರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಅನಿವಾಸಿ ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಫಾರೂಕ್ ಮುಲ್ಕಿ, ಅಬ್ದುಲ್ ಹಮೀದ್ RMX, BCCI ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಮಾಜಿ ಕಾರ್ಪೊರೇಟರ್ ರವೂಫ್ ಬಜಾಲ್, ಸಿನಾನ್ ಸಖಾಫಿ, ಅನೀಸ್ ಕೌಸರಿ ಹಾಗೂ ಮೊಹಮ್ಮದ್ ಕುಂಜಿ ಅವರು ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅಬ್ದುಲ್ ರಹ್ಮಾನ್ ಕೊಡಿಜಾಲ್ ಹಾಗೂ ಡಿಕೆ ಜಿಸಿಸಿ ಕೋ-ಆರ್ಡಿನೇಷನ್ ಕಮಿಟಿಯ ಹಣಕಾಸು ಉಸ್ತುವಾರಿ ಫಾರೂಕ್ ಅಬ್ಬಾಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿಕೆ ಜಿಸಿಸಿ ಕೋ-ಆರ್ಡಿನೇಷನ್ ಕಮಿಟಿಯ ಮುಖಂಡರಾದ ಕಬೀರ್ ಲಕ್ಕಿಸ್ಟರ್, ರಫೀಕ್ ಕೆ.ಎಚ್, ಮೊಹಮ್ಮದ್ ಮತೀನ್, ಕಬೀರ್ ಕೆ.ಎಂ, ಫಾರೂಕ್ ಪೋರ್ಟ್‌ವೇ, ಕಾಸಿಂ ಎಚ್. ಕೆ. ದುಬೈ, ಫಾರೂಕ್ ಮಲ್ನಾಡ್, ಡ್ಯಾನಿಶ್, ಸಯ್ಯಿದ್ ತಂಙಲ್, ಹಫೀಜ್ ಸಾಸ್ಕೋ, ಬಶೀರ್ ಅಲ್-ಫಲಾಹ್, ಆರಿಫ್ ಜೋಕಟ್ಟೆ, ಕೆ.ಸಿ. ಮೊಹಮ್ಮದ್ ಅಲಿ ಹಾಗೂ ಝೈನ್ ಜಿದ್ದಾ DK-GCC ಗೆ ದಾಖಲೆ ತಯಾರಿಸಲು ಸಹಕರಿಸಿದ ವಕೀಲರುಗಳಾದ ಮುಖ್ತಾರ್ ಅಹ್ಮದ್, ಸರ್ಫ್ರಾಝ್, ಇಸಾಕ್, ಇಲ್ಯಾಸ್, ಝೀಶನ್ ಅಲಿ ಹಾಗೂ ಇರ್ಷಾದ್ ಎನ್ ಜಿ ಮೂಡುಬಿದಿರೆ ಉಪಸ್ಥಿತರಿದ್ದರು.
ಮೂಡುಬಿದಿರೆ ಈದ್ಗಾ ಮಸೀದಿಯ ಪ್ರತಿನಿಧಿಗಳಾದ ಮಾಜಿ ಪುರಸಭಾ ಸದಸ್ಯ ಬಶೀರ್, ಅಲ್ತಾಫ್, ಇರ್ಫಾನ್ ಬೆದ್ರ ಹಾಗೂ ಸಂಗಬೆಟ್ಟು ಮಸೀದಿ ಅಧ್ಯಕ್ಷ ಇಬ್ರಾನ್ ಖಾನ್ ಹಾಗೂ ಕಾರ್ಯದರ್ಶಿ ಇಸ್ಮಾಯಿಲ್, ಶಾಂತಿನಗರ ಮಸೀದಿ ಅಧ್ಯಕ್ಷ ಅಶ್ರಫ್ PH, ಮುಸ್ಲಿಂ ಸೆಂಟ್ರಲ್ ಕಮಿಟಿ ಮೂಡುಬಿದಿರೆ ತಾಲೂಕು ಪ್ರತಿನಿಧಿ ಇಬ್ರಾಹಿಂ ಹಂಡೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಕ ಜಿಲ್ಲಾ ವಕಫ್ ಬೋರ್ಡ್ ಸದಸ್ಯ ಸೈದುದ್ದೀನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು







