ಅಳಿಯೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿರುವ ಶ್ರೀ ಕಟಿಲೇಶ್ವರಿ ಕ್ರೇಕರ್ಸ್ ಸಹಕಾರದ ವಿದ್ಯಾಗಣಪತಿ ಪಟಾಕಿ ಮಳಿಗೆಯನ್ನು ಶಿರ್ತಾಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿ ಕಂದಿರು ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಸುವರ್ಣ, ಉದ್ಯಮಿಗಳಾದ ಸನತ್ ಕುಮಾರ್ ಜೈನ್, ಪದ್ಮನಾಭ ಕೋಟ್ಯಾನ್, ಪ್ರಶಾಂತ್, ಹರೀಶ್, ಫೊಟೊಗ್ರಾಫರ್ ಸುಕುಮಾರ್ ಜೈನ್, ಜಗದೀಶ್ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಮಳಿಗೆಯ ಮುಖ್ಯಸ್ಥ, ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು ಭಾಗವಹಿಸಿದವರನ್ನು ಸ್ವಾಗತಿಸಿ ವಂದಿಸಿದರು.
