ಮೂಡುಬಿದಿರೆ ವಲಯ ಶಾಮಿಯಾನ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಸ್.ಎರೇಂಜರ್ಸ್ ನ ಮಾಲಕರಾದ ರಮಾನಾಥ ಸಾಲ್ಯಾನ್ ಪಣಪಿಲ ಅವರು ಆಯ್ಕೆಯಾಗಿದ್ದಾರೆ.
ಕಳೆದ ಎರಡು ದಶಕಗಳಿಂದ ವಿ.ಎಸ್.ಎರೇಂಜರ್ಸ್ ಮೂಲಕ ಜನಪ್ರಿಯರಾಗಿರುವ ರಮಾನಾಥ ಸಾಲ್ಯಾನ್ ಅವರು ತನ್ನ ಉದ್ಯಮದ ಜತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಪುತ್ರ ಅಶ್ವಥ್ ಪಣಪಿಲ ಸಹಿತ ಮನೆಮಂದಿಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡಿ ಸ್ಥಳೀಯವಾಗಿ ವಿ.ಎಸ್.ಎಂದೇ ಹೆಸರುಗಳಿಸಿ ಸರ್ವಧರ್ಮೀಯರೊಂದಿಗೂ ಆತ್ಮೀಯ ಒಡನಾಟ ಇಟ್ಟುಕೊಂಡವರು.
ಪ್ರಚಾರದಿಂದ ಕೊಂಚ ದೂರವೇ ಇರುವ ರಮಾನಾಥ ಸಾಲ್ಯಾನ್ ಅವರಿಗೆ ಇದೀಗ ಮೂಡುಬಿದಿರೆ ವಲಯ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಎನ್ನುವ ದೊಡ್ಡ ಜವಾಬ್ದಾರಿ ಸಿಕ್ಕಿದೆ.







