ಸಂದೀಪ್ ಬೆದ್ರ ಮೂಡುಬಿದಿರೆ ಸಮೀಪದ ಅಶ್ವಥ್ಥಪುರದವರು.
ಇವರದು ತುಳು ಚಿತ್ರರಂಗದ ತಾಂತ್ರಿಕ ವಲಯದಲ್ಲಿ ಚಿರಪರಿಚಿತ ಹೆಸರು .ಕಳೆದ ಹತ್ತು ವರ್ಷಗಳಲ್ಲಿ ಸುಮಾರು
24 ಹೆಚ್ಚು ಕನ್ನಡ ತುಳು ಕೊಂಕಣಿ ಸಿನಿಮಾಗಳಲ್ಲಿ ಸಹಾಯಕ ,ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವಿ . ತುಳುವಿನ ಎಲ್ಲಾ ಬಹುತೇಕ ಹಿಟ್ ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಸಹ ನಿರ್ದೇಶಕ. ಬಹುಶಃ ಇಷ್ಟೊಂದು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವಿ ಯುವ ಸಹ ನಿರ್ದೇಶಕನನ್ನು ನಾನು ಯಾವತ್ತೂ ಕಂಡಿಲ್ಲ .ಇದೀಗ ತನ್ನೆಲ್ಲ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಮೊದಲ ಬಾರಿಗೆ ತುಳು ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದಾರೆ ,ಈ ಸಿನಿಮಾದ ಹೆಸರೇ “ಪಿಚ್ಚರ್”
ತುಳು ಚಿತ್ರರಂಗದ ಈ ವರ್ಷದ ಅತ್ಯಂತ ದೊಡ್ಡ ತಾರಾ ಬಳಗದ ಸಿನಿಮಾ.ತುಳು ಚಿತ್ರರಂಗದ ಎಲ್ಲಾ ಗಣ್ಯ ಕಲಾವಿದರು ಹಾಸ್ಯ ಕಲಾವಿದರು ನಟಿಸಿದ್ದಾರೆ. ಸಂದೀಪ್ ಗೆ ಗೊತ್ತಿದೆ ತುಳು ಪ್ರೇಕ್ಷಕರಿಗೆ ಯಾವ ಊಟ ಬಡಿಸಬೇಕು ಎಂದು ,ಅದನ್ನು ಸಂಪೂರ್ಣವಾಗಿ ಅರಿತು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಖಂಡಿತ ಇದೊಂದು ತುಳು ಚಿತ್ರರಂಗ ಸದಾ ನೆನಪಿನಲ್ಲಿ ಇಡುವ ಸಿನಿಮವಾಗಲಿದೆ ಅದಕ್ಕೆ ನಾನು ಗ್ಯಾರೆಂಟಿ. ಈ ಸಿನಿಮಾದಲ್ಲಿ ಎಷ್ಟು ಹಾಸ್ಯ ಕಲಾವಿದರು ಇದ್ದಾರೆ ಎಂದರೆ ನೀವು ಸಿನಿಮಾ ನೋಡಲೇಬೇಕು. ಅಷ್ಟು ಕಲಾವಿದರು ಅಷ್ಟು ತಂತ್ರಜ್ಞರು ಇವರನ್ನೆಲ್ಲ ಸಂಭಾಳಿಸುವುದು ಸುಲಭದ ಮಾತಲ್ಲ (ತುಳು ಚಿತ್ರರಂಗದಲ್ಲಿ ಕೆಲಸ ಮಾಡಿದವರಿಗೆ ಇದರ ಅನುಭವವಿರುತ್ತದೆ ) ಇಲ್ಲಿ ಸಂದೀಪನ ಅನುಭವ ಕೆಲಸ ಮಾಡಿದೆ.ಇದೊಂದು
ಸಂಪೂರ್ಣ ಹಾಸ್ಯಮಯ ಸಿನಿಮಾ.ಈಗಾಗಲೇ ಪ್ರೀಮಿಯರ್ ಶೋಗಳಲ್ಲಿ ಚಿತ್ರ ನೋಡಿದ ವೀಕ್ಷಕರು ಬಹುಪರಾಕ್ ಅಂದಿದ್ದಾರೆ .ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಸಂದೀಪ ಬೆದ್ರರ ಈ ಸಿನಿಮಾವನ್ನು ಎಲ್ಲರು ನೋಡಿ ಯುವ ನಿರ್ದೇಶಕನ್ನು ಬೆಂಬಲಿಸಿ.
-ಕಿಶೋರ್ ಮೂಡುಬಿದಿರೆ
ಚಲನಚಿತ್ರ ನಿರ್ದೇಶಕ










