ಮೂಡುಬಿದಿರೆಯಲ್ಲಿ ಸಹಾಯಕ ಅಭಿಯಂತರರಾಗಿ ಜನಮನ್ನಣೆ ಗಳಿಸಿದ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ನಿಷ್ಠಾವಂತ ಅಧಿಕಾರಿ ಜಗದೀಪ್ ಶೇಠೆ ಅವರು ಇದೀಗ ಬೆಳ್ತಂಗಡಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಬೀಳ್ಕೊಟ್ಟು ಸನ್ಮಾನಿಸಿದ ಕಾರ್ಯಕ್ರಮ ಮೂಡುಬಿದಿರೆ ಪಂಚರತ್ನ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆಯಿತು.
ಗುತ್ತಿಗೆದಾರರ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ, ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಗುತ್ತಿಗೆದಾರರಾದ ಸಂತೋಷ್ ಶೆಟ್ಟಿ, ನಟರಾಜ್ ಜೈನ್ ಸಹಿತ ಮೂಡುಬಿದಿರೆ ಪರಿಸರದ ಗುತ್ತಿಗೆದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಂಜಿತ್ ಪೂಜಾರಿ ಸ್ವಾಗತಿಸಿ ಪ್ರಶಾಂತ್ ಮತ್ಲ್ ಮಾರ್ ವಂದಿಸಿದರು. ಸುಕೇಶ್ ಶೆಟ್ಟಿ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು. ಭರತ್ ಸಹಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಪ್ ಶೇಠೆ ಅವರು ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
