ಸಾಲ: ನೇಣಿಗೆ ಶರಣಾದ ಇರುವೈಲಿನ ಯುವಕ

Picture of Namma Bedra

Namma Bedra

Bureau Report

ಹಣಕಾಸಿನ ಸಮಸ್ಯೆ, ಸಾಲದಿಂದ ನೊಂದಿದ್ದ ಇರುವೈಲಿನ ಯುವಕನೋರ್ವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇರುವೈಲು ಪೊರಿಮೇಲುವಿನ ನಾರಾಯಣ ಎಂಬವರ ಪುತ್ರ ದೀಪಕ್ (32) ಆತ್ಮಹತ್ಯೆ ಮಾಡಿಕೊಂಡವನು.
ದೀಪಕ್ ಟೂರಿಸ್ಟ್ ವಾಹನಗಳಿಗೆ ಬದಲಿ ಚಾಲಕನಾಗಿ ಹೋಗುತ್ತಿದ್ದು ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ.ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top