ಮೂಡುಬಿದಿರೆ: ಗಾಂಧಿನಗರ ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ 8ರಂದು ‘ಆಟಿಯ ಗಮ್ಮತ್ತು’ ಕಾರ್ಯಕ್ರಮ ನಡೆಯಿತು.
ವಾಸ್ತು ಹಾಗೂ ಜ್ಯೋತಿಷ್ಯ ಸಲಹೆಗಾರ ಪ್ರಭಾಕರ್ ಶೆಟ್ಟಿ ಆಟಿಯ ಮಹತ್ವದ ಕುರಿತು ಮಾತನಾಡಿದರು. ಆಟಿ ಆಚರಣೆ ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿಲ್ಲ. ವೈಜ್ಞಾನಿಕವಾಗಿಯೂ ಆಟಿ ಆಚರಣೆಗೆ ಮಹತ್ವವಿದೆ. ಆಟಿ ತಿಂಗಳ ವಿಶೇಷತೆ ಹಾಗೂ ಅದರ ಮಹತ್ವದ ಕುರಿತು ಹಿರಿಯರು ಕಿರಿಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಮೂಡುಬಿದಿರೆ ಪುರಸಭೆ ಪರಿಸರ ಅಭಿಯಂತರ ಶಿಲ್ಪಾ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕರಾದ ಸುಪ್ರಿತಾ, ಸುಮಾ, ಪ್ರವೀಣ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಪದ್ಧತಿಯ ಪರಿಚಯ ಹಾಗೂ ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಪೋಷಕರು ವಿವಿಧ ಆಟಿ ತಿನಿಸುಗಳನ್ನು ತಯಾರಿಸಿ ತಂದಿದ್ದರು. ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಪ್ರದರ್ಶನ ಹಾಗೂ ಸವಿಯುವಿಕೆಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಶೂನ್ಯ ತ್ಯಾಜ್ಯ ಪರಿಕಲ್ಪನೆಯಡಿಯಲ್ಲಿ ಕಾರ್ಯಕ್ರಮ ನಡೆಯಿತು.











