ಖಾಸಗಿ ಬಸ್ಸಿನಲ್ಲೂ ಸರಕಾರಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡಹುದೆನ್ನುವುದನ್ನು ಮೂಡುಬಿದಿರೆಯ ಪ್ರದೀಪ್ತ ಬಸ್ಸಿನ ಮಾಲಕರು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.
ನಾರಾವಿ- ಮಂಗಳೂರು ರಸ್ತೆಯಲ್ಲಿ ಓಡಾಡುವ ಪ್ರದೀಪ್ತ ಬಸ್ಸಿನಲ್ಲಿ ಸರಕಾರಿ ಶಾಲೆ, ಹೈಸ್ಕೂಲ್ ಹಾಗೂ ಪಿಯು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಈ ಉಚಿತದ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿರುವ ಈ ಉಚಿತ ವ್ಯವಸ್ಥೆಯಿಂದ ಹಲವಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಬಡ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಇದೊಂದು ಸಣ್ಣ ಕೊಡುಗೆ ಎಂದು ಪ್ರದೀಪ್ತ ಬಸ್ಸು ಮಾಲಕರಾದ ಕೌಸ್ತುಭ್ ಜೈನ್ ಅವರು ತಿಳಿಸಿದ್ದಾರೆ.







































